ಮಂಗಳವಾರ, ಮಾರ್ಚ್ 21, 2023
23 °C

ವಾಚಕರ ವಾಣಿ: ಸಾವರ್ಕರ್‌ ನಿಲುವಿಗೆ ವಿರುದ್ಧ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಗಣೇಶೋತ್ಸವದಲ್ಲಿ ಎಲ್ಲೆಡೆ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾವಚಿತ್ರ ಪ್ರದರ್ಶಿಸಬೇಕು ಎಂಬ ಸೂಚನೆ ಎಲ್ಲಾ ಮಂಡಳಿಗಳಿಗೆ ಸಂಘ ಪರಿವಾರದ ಕಡೆಯಿಂದ ಹೋಗಿದೆಯೆಂಬ ವರದಿಯಿದೆ. ಸಾವರ್ಕರ್‌ ಅವರು ಪಕ್ಕಾ ನಾಸ್ತಿಕರಾಗಿದ್ದರು. ಸ್ವತಃ ಅವರೇ ಬರೆದಿರುವ ಕೆಲವು ಕೃತಿಗಳಲ್ಲಿ ಇದು ಉಲ್ಲೇಖಿತವಾಗಿದೆ. ಯಾವುದೇ ಮನುಷ್ಯ ಅಥವಾ ಪ್ರಾಣಿ ರೂಪದ ದೇವರ ಬಗ್ಗೆ ಅವರು ನಂಬಿಕೆ ಹೊಂದಿರಲಿಲ್ಲ. ಸಾವರ್ಕರ್‌ ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರು ಹಾಗೂ ಅವರ ಕುಲದೇವರು ಗಣೇಶ ಆಗಿದ್ದರೂ ಅವರ ಜೀವನಕಾಲದಲ್ಲಿ ಅವರೆಂದೂ ಯಾವುದೇ ಗಣೇಶೋತ್ಸವದಲ್ಲಿ ಪಾಲ್ಗೊಂಡ ಬಗ್ಗೆ ವಿವರಗಳಿಲ್ಲ. ಹಾಗಿರುವಾಗ ನಾಸ್ತಿಕ ಸಾವರ್ಕರ್‌ ಅವರ ಭಾವಚಿತ್ರಗಳನ್ನು ಈಗ ಗಣೇಶೋತ್ಸವದಲ್ಲಿ ಪ್ರದರ್ಶಿಸುವುದು ಸಾವರ್ಕರ್‌ ಅವರಿಗೆ ಅವಮಾನ ಎಸಗಿದಂತೆ. ಗೋವಿನ ಹೊಟ್ಟೆಯಲ್ಲಿ 33 ಕೋಟಿ ದೇವರುಗಳು ಇದ್ದಾರೆ ಎಂಬ ನಂಬಿಕೆಯನ್ನೂ ಸಾವರ್ಕರ್‌ ಪ್ರಶ್ನಿಸಿದ್ದರು.

-ಉದಯರಾಜ್ ಆಳ್ವಾ, ಮಂಗಳೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು