ವಾಚಕರ ವಾಣಿ| ಹಂಪನಾ ವಿಚಾರಣೆ: ಕಿಡಿಗೇಡಿಗಳಿಗೆ ಶಿಕ್ಷೆಯಾಗಲಿ
ದೂರು ಬಂದರೆ ಪೊಲೀಸರಿಗೆ ವ್ಯಭಿಚಾರಿಯೂ ಒಂದೇ ವಿದ್ವಾಂಸರೂ ಒಂದೇ ಆದರೆ ಹೇಗೆ? ಹಾಗೆಂದು ಕಾನೂನು ಇಬ್ಬರಿಗೂ ಬೇರೆ ಬೇರೆ ಆಗಬಾರದು ಎಂಬುದೂ ನಿಜ. ಆದರೆ ಅದು ಸರಿಯಾಗಿ ವಿಚಾರಣೆ ನಡೆದು ಆರೋಪ ಸಾಬೀತಾದ ಮೇಲೆ ವಿಧಿಸಬೇಕಾದ ಶಿಕ್ಷೆ. ಪ್ರೊ. ಹಂಪನಾ ಅವರ ಹೇಳಿಕೆಯ ಹಿಂದಿನ ಸಾಮಾಜಿಕ ಕಾಳಜಿ ಏನು ಎಂಬುದನ್ನು ಪೊಲೀಸರು ತಾಳ್ಮೆಯಿಂದ ಗ್ರಹಿಸದೆ, ಯಾರೋ ದುರುದ್ದೇಶದಿಂದ ಕೊಟ್ಟ ದೂರನ್ನು ಒಪ್ಪಿ, ವಯೋವೃದ್ಧ ಸಾಹಿತಿಯನ್ನು ದೂರದ ಮಂಡ್ಯಕ್ಕೆ ಕರೆಸಿದ್ದು ಸರಿಯಲ್ಲ. ಬೇಕೆಂದರೆ ಸ್ಥಳೀಯ ಪೊಲೀಸರೇ ಮನೆಗೆ ತೆರಳಿ ಹೇಳಿಕೆ ಪಡೆಯಬಹುದಿತ್ತಲ್ಲವೇ?
ನಿಜವಾಗಿ ವಿಚಾರಣೆ ಹಾಗೂ ಶಿಕ್ಷೆ ಆಗಬೇಕಾದದ್ದು ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ಕೇವಲ ದುರುದ್ದೇಶದ ದೂರು ನೀಡಿ ಕಿತಾಪತಿಗೆ ಕಾರಣವಾಗುವ ಕಿಡಿಗೇಡಿಗಳಿಗೆ.
- ಟಿ.ಗೋವಿಂದರಾಜು, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.