ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಸಬೇಕಿರುವುದು ಅಪರಿಚಿತ ಭಾಷೆಯನ್ನಲ್ಲ

Last Updated 15 ಸೆಪ್ಟೆಂಬರ್ 2021, 20:20 IST
ಅಕ್ಷರ ಗಾತ್ರ

ಹಿಂದಿಯನ್ನು ಲೋಕಭಾಷೆಯಾಗಿ ಬೆಳೆಸಬೇಕಿದೆ ಎಂದು ಎಚ್‌.ಎಸ್‌.ಮಂಜುನಾಥ ಹೇಳಿದ್ದಾರೆ (ವಾ.ವಾ., ಸೆ. 14). ಯಾವ ಕಾರಣಕ್ಕಾಗಿ ಹಿಂದಿಯನ್ನು ಹಾಗೆ ಬೆಳೆಸಬೇಕಿದೆಯೋ ಅರ್ಥವಾಗಲಿಲ್ಲ! ಭಾಷೆ ಇರುವುದು ಪರಸ್ಪರ ಮಾತನಾಡಲು. ಇಂದು ನಾವು ಬ್ಯಾಂಕಿಗೆ ಹೋದರೆ ಅಲ್ಲಿ ನಮ್ಮೊಂದಿಗೆ ನಮ್ಮ ಭಾಷೆಯಲ್ಲಿ ಮಾತನಾಡುವವರೇ ಇಲ್ಲ. ಹೀಗಾಗಿ ಬಡಪಾಯಿ ಗ್ರಾಹಕರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಈ ಹಿನ್ನೆಲೆಯಲ್ಲಿ ಜನರ ಭಾಷೆಯನ್ನು ಬೆಳೆಸಬೇಕಿದೆಯೇ ಹೊರತು ಹಿಂದಿ, ಇಂಗ್ಲಿಷ್‌ನಂಥ ಅಪರಿಚಿತ ಭಾಷೆಗಳನ್ನಲ್ಲ. ಯಾವ ಭಾಷೆಯನ್ನೇ ಆಗಲಿ ಒತ್ತಾಯದಿಂದ ಬೆಳೆಸಲೂ ಆಗುವುದಿಲ್ಲ. ಅಂಥ ಪ್ರಯತ್ನಕ್ಕೆ ಸುರಿಯುವ ಹಣ ವ್ಯರ್ಥವಲ್ಲವೇ?

– ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ,ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT