ಬುಧವಾರ, ಏಪ್ರಿಲ್ 1, 2020
19 °C

ಪ್ಲಾಸ್ಟಿಕ್‌: ಈ ಕ್ರಮ ಬೇಕೇ?

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಅಂಗಡಿ, ತರಕಾರಿ ಮಾರುಕಟ್ಟೆ ಹಾಗೂ ರಸ್ತೆ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಸತತವಾಗಿ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಳ್ಳು ತ್ತಾರೆ. ಬಹಳ ನಿಷ್ಠೆಯಿಂದ ಅವರಿಗೆ ಸಾವಿರಗಟ್ಟಲೆ ದಂಡ ವಿಧಿಸುತ್ತಾರೆ. ಈ ಕೆಲಸ ಒಳ್ಳೆಯದೆ. ಆದರೆ, ಅಷ್ಟಾದರೂ ಇಂದಿಗೂ ಎಂದಿನಂತೆ ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ತೆಳು ಪ್ಲಾಸ್ಟಿಕ್ ಕೈಚೀಲ ರಾಜಾರೋಷವಾಗಿ ಹಾರಾಡುತ್ತಲೇ ಇದೆ.

ಈ ಕೈಚೀಲಗಳನ್ನು ವ್ಯಾಪಾರಸ್ಥರು ಸಗಟು ವ್ಯಾಪಾರಸ್ಥರಿಂದ ಹಾಗೂ ಸಗಟು ವ್ಯಾಪಾರಸ್ಥರು ಕಾರ್ಖಾನೆಗಳಿಂದ ಕೊಂಡು ತರುತ್ತಾರೆ. ಹಾಗಿದ್ದಲ್ಲಿ ಈ ದಾಳಿ, ದಂಡ, ವಶಪಡಿಸಿಕೊಳ್ಳುವ ‘ಸರಣಿ ಧಾರಾವಾಹಿ’ಯ ಅವಶ್ಯಕತೆಯಾದರೂ ಏನು? ಅಧಿಕಾರಿಗಳು ಬಹಳ ಮುಖ್ಯವಾಗಿ, ಕಾರ್ಖಾನೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತಯಾರಿಕೆಗೆ ತಡೆ ಒಡ್ಡಿದರೆ ಸಮಸ್ಯೆ ಬಗೆಹರಿದಂತೆ ಅಲ್ಲವೇ? ಆ ಪ್ಲಾಸ್ಟಿಕ್ ಅನ್ನು ಮನೆಯಲ್ಲಿ ಜನ ತಯಾರಿಸಲು ಸಾಧ್ಯವೇ?

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)