ಶನಿವಾರ, ಅಕ್ಟೋಬರ್ 24, 2020
27 °C

ಮರೀಚಿಕೆಯಾಗದಿರಲಿ ಮನುಷ್ಯತ್ವ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ನಾಳೆ (ಅ. 4) ವಿಶ್ವ ಪ್ರಾಣಿಗಳ ದಿನ. ಸಕಲ ಚರಾಚರ ಜೀವಿಗಳು ನೆಮ್ಮದಿಯಿಂದ, ಸುಖ ಸಂತೋಷದಿಂದ ಬದುಕಿ ಬಾಳಬೇಕೆಂದು ಭಗವಂತ ಸೃಷ್ಟಿಸಿದ ಈ ಭೂಮಿಯಲ್ಲಿ, ಮಾನವನ ಸ್ವಾರ್ಥಲಾಲಸೆಗೆ ಸಿಕ್ಕ ಪ್ರಾಣಿಗಳ ಬದುಕು ನರಕಸದೃಶವಾಗಿದೆ. ಪ್ರಾಣಿ ಸಂರಕ್ಷಣಾ ಕಾನೂನು ಜಾರಿಯಲ್ಲಿದ್ದರೂ ಪ್ರಾಣಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಬೀದಿ ನಾಯಿಯ ಕಾಟವೆಂದು, ಹೆಣ್ಣುನಾಯಿ ಮರಿ ಹಾಕಿದೆಯೆಂದು ಅವುಗಳನ್ನು ದೂರ ಅಟ್ಟುವುದು, ಕೊಂದು ಹಾಕುವುದನ್ನು ನೋಡಿದಾಗ ಕರುಳು ಹಿಂಡುತ್ತದೆ. ಒಂಟೆತ್ತಿನ ಬಂಡಿಯ ಮೇಲೆ ಹೊರಲಾರದ ಭಾರ ಹೇರಿ, ಆ ಎತ್ತನ್ನು ಹೊಡೆದು ಬಡಿದು ಮುನ್ನಡೆಸುವುದು, ಗೋವುಗಳನ್ನು ಅತ್ಯಂತ ಕಿರಿದಾದ ಜಾಗದಲ್ಲಿ ಕಟ್ಟಿಹಾಕುವುದು, ಜೀವಂತ ಪ್ರಾಣಿಗಳನ್ನು ಪ್ರಯೋಗ ಪಶುಗಳನ್ನಾಗಿಸುವುದು... ಒಂದೇ, ಎರಡೇ? ಮನುಷ್ಯನ ಕ್ರೌರ್ಯಕ್ಕೆ ಎಣೆಯುಂಟೇ?

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಒಂದೇ ವ್ಯತ್ಯಾಸವೆಂದರೆ ಅದು ಮನುಷ್ಯತ್ವ. ನಾಗರಿಕತೆ ಬೆಳೆದಂತೆಲ್ಲ ಮನುಷ್ಯತ್ವ ಮರೀಚಿಕೆಯಾಗುತ್ತಿರುವುದು ವಿಪರ್ಯಾಸವೇ ಸರಿ.

ಅನಸೂಯತ್ರಿ ವಿಕ್ರಮ್, ಕೇದಿಗೆಮನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.