ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಂಚೆ ಇಲಾಖೆ ಅಧ್ವಾನಕ್ಕೆ ಹೊಣೆಯಾರು?

Last Updated 26 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಅಂಚೆ ಇಲಾಖೆಯ ಅಧ್ವಾನಗಳ ಬಗ್ಗೆ ಡಾ. ಚೆನ್ನು ಹಿರೇಮಠ ಅವರು ಲೇಖನ ಬರೆದಿದ್ದಾರೆ (ಸಂಗತ, ಆ. 26). ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಇನ್ನೂ ಗಟ್ಟಿಯಾಗಬೇಕು ಎಂಬುದನ್ನು ಸಂಬಂಧಿಸಿದ ಸಚಿವಾಲಯ ಗಮನಿಸಬೇಕು. ನೌಕರರ ನೇಮಕಾತಿ ಇಲ್ಲ, ಕರಾರು– ಗುತ್ತಿಗೆ ನೌಕರರೆಂದು ನೇಮಿಸಿಕೊಂಡು ಅವರಿಗೆ ಸಂಬಳ– ಸೌಕರ್ಯಗಳನ್ನು ಏಜೆನ್ಸಿಗಳ ಮೂಲಕ ಕೊಡಿಸುವ ತೀರ್ಮಾನವನ್ನು ಇಲಾಖೆಯ ನೌಕರರು
ತೆಗೆದುಕೊಂಡಿದ್ದಲ್ಲ.

ಸರ್ಕಾರಿ ಸ್ವಾಮ್ಯದ ಎಲ್ಲವನ್ನೂ‌ ಖಾಸಗಿಯವರ ಕೈಗೆ ಒಪ್ಪಿಸುವ ಖಾಸಗೀಕರಣದ ನೀತಿಯ ಬೀಜವನ್ನು ಅಂದಿನ ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರ ಬಿತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ಗೊಬ್ಬರ ಹಾಕಿ ಹೆಮ್ಮರವಾಗಿ ಬೆಳೆಸುತ್ತಿದೆ. ನಾವು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡಬೇಕು. ಸರ್ಕಾರಿ ಉದ್ದಿಮೆ, ಸಂಸ್ಥೆಗಳನ್ನು ಬಲಗೊಳಿಸಬೇಕು. ನಂತರ ನೌಕರರಿಗೆ ಕಾರ್ಯಕ್ಷಮತೆಯ ಪಾಠ ಹೇಳಿದರೆ ಸಮಂಜಸವಾದೀತು. ಅದನ್ನು ಬಿಟ್ಟು, ಇಲಾಖೆಯ ಕೆಳಹಂತದ‌ ವ್ಯವಸ್ಥೆಯನ್ನು ಹಳಿಯುವುದರಿಂದ ಪ್ರಯೋಜನವಿಲ್ಲ.

-ಕೆ.ಎಸ್.ವಿಮಲಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT