‘ಕಣ್ಣಿಗೆ ಕಟ್ಟುವ’ ವಿವರಣೆ ಬೇಕಿಲ್ಲ

ಗುರುವಾರ , ಜೂನ್ 20, 2019
31 °C

‘ಕಣ್ಣಿಗೆ ಕಟ್ಟುವ’ ವಿವರಣೆ ಬೇಕಿಲ್ಲ

Published:
Updated:

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟಿ.ವಿ ಚಾನೆಲ್‌ನಲ್ಲಿ ಪ್ರಸಾರವಾದ, ಕನ್ನಡ ಕ್ರಿಕೆಟ್ ವೀಕ್ಷಕ ವಿವರಣೆ ಕುರಿತು ಎಂ.ಪರಮೇಶ್ವರ ಅತೃಪ್ತಿ ವ್ಯಕ್ತಪಡಿಸಿದ್ದಾರೆ (ವಾ.ವಾ., ಮೇ 15).

ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿದ್ದ ಕ್ರಿಕೆಟ್ ವೀಕ್ಷಕ ವಿವರಣೆಯನ್ನು ದೃಶ್ಯ ಮಾಧ್ಯಮದ ವೀಕ್ಷಕ ವಿವರಣೆಯೊಂದಿಗೆ ಹೋಲಿಸುವುದು ಸರಿಯಲ್ಲ. ರೇಡಿಯೊದಲ್ಲಿ ಮಾತಿಗೆ ಪ್ರಾಧಾನ್ಯ, ದೂರದರ್ಶನದಲ್ಲಿ ದೃಶ್ಯಕ್ಕೆ ಮಹತ್ವ. ಅದರಿಂದ, ಆಕಾಶವಾಣಿಯಂತೆ ದೂರದರ್ಶನದಲ್ಲಿ ವೀಕ್ಷಕ ವಿವರಣೆಯನ್ನು ‘ಕಣ್ಣಿಗೆ ಕಟ್ಟುವಂತೆ’ ನೀಡುವ ಅಗತ್ಯ ಇರುವುದಿಲ್ಲ.

ಆಕಾಶವಾಣಿಯಲ್ಲಿ ಇಂಗ್ಲಿಷ್ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ಅನುವಾದಿಸಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡುತ್ತಿದ್ದರು. ಆ ಕನ್ನಡ ಪದಗಳು ಅಪರಿಚಿತ ಪದಗಳಾದ್ದರಿಂದ, ಆ ವೀಕ್ಷಕ ವಿವರಣೆ ಆಪ್ಯಾಯಮಾನ ಎನಿಸುತ್ತಿರಲಿಲ್ಲ. ಆದರೆ ಕನ್ನಡದಲ್ಲಿ ವೀಕ್ಷಕ ವಿವರಣೆಗಾರರು ಇಂಗ್ಲಿಷ್ ಪಾರಿಭಾಷಿಕ ಪದಗಳನ್ನೇ ಬಳಸುತ್ತಿರುವುದರಿಂದ ಈ ವಿವರಣೆ ನಿಜಕ್ಕೂ ಚೆನ್ನಾಗಿದೆ. ಪೂರ್ತಿ ಅರ್ಥವಾಗದ ಹಿಂದಿ, ಇಂಗ್ಲಿಷ್ ಚಾನೆಲ್‍ಗಳಿಗೆ ಈವರೆಗೆ ಜೋತುಬಿದ್ದು ಕ್ರಿಕೆಟ್‍ನ್ನು ಆಸ್ವಾದಿಸದೇ ಹೋದೆವಲ್ಲಾ ಎಂದು ವ್ಯಥೆಯಾಗುತ್ತದೆ. ಸದ್ಯ ಈಗಲಾದರೂ ಕನ್ನಡ ಚಾನೆಲ್‍ನಲ್ಲಿ ಹೃದಯಕ್ಕೆ ಹತ್ತಿರವಾದ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ಕೇಳುವ ಸೌಭಾಗ್ಯ ದೊರೆತಿದ್ದಕ್ಕಾಗಿ ಸಂತೋಷವಾಗುತ್ತದೆ. ವಿಶ್ವಕಪ್‍ ಕ್ರಿಕೆಟ್‌ನಲ್ಲೂ ಇದೇ ರೀತಿಯ ಕನ್ನಡ ವೀಕ್ಷಕ ವಿವರಣೆ ಮೂಡಿಬರಲಿ.

ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !