ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವೆಂದರೆ ಬರೀ ಕನ್ನಡವಲ್ಲ...

Last Updated 1 ನವೆಂಬರ್ 2022, 20:00 IST
ಅಕ್ಷರ ಗಾತ್ರ

‘ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮಸೂದೆ– 2022’ ಅನ್ನು ರಾಜ್ಯ ಸರ್ಕಾರ ಈಚೆಗೆ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ. ಆ ಮಸೂದೆಯು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವುದರ ಕಡೆಗೆ ಮಾತ್ರ ಲಕ್ಷ್ಯ ಕೊಟ್ಟಿದ್ದು, ಅದರಲ್ಲಿ ತುಳು, ಕೊಡವ, ಕನ್ನಡ-ಕೊಂಕಣಿ ಹಾಗೂ ಬ್ಯಾರಿ ನುಡಿಗಳ ಭವಿಷ್ಯವನ್ನು ಕಾಯುವ ಮಾತೇ ಇಲ್ಲವಾಗಿದೆ. ಈ ವಿಷಯದಲ್ಲಿ ಆ ನಮ್ಮ ನಾಡುನುಡಿಗಳ ಹಿತವನ್ನು ಕಾಯುವ ಸಂಘಟನೆಗಳು ಎತ್ತಿರುವ ಆಕ್ಷೇಪ ನ್ಯಾಯಯುತವಾದದ್ದು.

ನಮ್ಮ ರಾಜ್ಯವು ಕನ್ನಡ ನುಡಿಯನ್ನು ಮಾತ್ರ ಆಡುವವರಿಗೆ ಸೇರಿದ್ದಲ್ಲ. ನಿಜಕ್ಕೂ, ಕರ್ನಾಟಕದ ಮುಖ್ಯ ನುಡಿಗಳೆಂದರೆ ಕನ್ನಡದ ಜೊತೆಗೆ ಈ ನುಡಿಗಳೂ ಹೌದಲ್ಲವೆ? ಕರ್ನಾಟಕದವರು ಎಂದರೆ ಈಗ ಹೆಸರಿಸಿದ ಆ ನುಡಿಗಳನ್ನು (ಮತ್ತು ಇನ್ನೆಷ್ಟೋ ದೇಸಿ ನುಡಿಗಳನ್ನು) ಆಡುವವರು ಕೂಡ ಹೌದಲ್ಲವೆ? ಅದು ಹಾಗಿರುವುದು ನಮ್ಮ ಭಾಗ್ಯವಲ್ಲವೆ? ಆದ್ದರಿಂದ ಕರ್ನಾಟಕ ಸರ್ಕಾರವು ಕನ್ನಡದ ಜೊತೆಗೆ ತುಳು, ಕೊಡವ, ಕನ್ನಡ-ಕೊಂಕಣಿ ಮತ್ತು ಬ್ಯಾರಿ ನುಡಿಗಳ ಸಮಗ್ರ ಅಭಿವೃದ್ಧಿಯೂ ನಡೆಯುವಂತೆ ಆ ಮಸೂದೆಗೆ ತಿದ್ದುಪಡಿ ತಂದು ಮಂಡಿಸಬೇಕಿದೆ.

-ರಘುನಂದನ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT