ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಕ್ತ ವರ್ಣಮಾಲೆಗೇಕೆ ತಕರಾರು?

ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ‘ಋ’ ಅಕ್ಷರವೇ ಬೇಡ ಎಂಬ ಒಂದು ವಾದ ಎದ್ದಿತ್ತು. ಆಗ ಕೆಲವರು, ರುಷಿ, ಕ್ರುತಕ, ಕ್ರುತ್ಯ, ತ್ರುಪ್ತಿ, ಕ್ರುಪಣ... ಹೀಗೆಲ್ಲ ಬರೆದು ತೃಪ್ತಿಪಟ್ಟುಕೊಂಡರು. ಅದೃಷ್ಟವಶಾತ್ ಅದು ಬಹಳ ದಿನ ಮುನ್ನಡೆಯಲಿಲ್ಲ. ‘ಮಹಾಪ್ರಾಣ’ಗಳ ಅಗತ್ಯ ಇಲ್ಲ ಎಂಬ ವಾದ ಕೂಡ ಆಗೀಗ ಚರ್ಚೆಯಾಗುತ್ತಿದೆ. ‘ವಧೆ’ ಯಾಕೆ ‘ವದೆ’ ಸಾಕಲ್ಲವೇ ಎನ್ನುತ್ತಾರೆ. ಮುಂದೊಮ್ಮೆ ಇದು ‘ಒದೆ’ ಆಗುವುದಿಲ್ಲ ಎಂದು ಹೇಳಲಾದೀತೆ? ಎಲ್ಲರೂ ತಮತಮಗೆ ತಿಳಿದಂತೆ ಬದಲಾಯಿಸಲು ತೊಡಗಿದರೆ, ವರ್ಣಮಾಲೆ ಎಲ್ಲಿದ್ದೀತು?! ಈಗೀಗ ಇಡೀ ತಂತ್ರಜ್ಞಾನವೇ ಇದಕ್ಕೆ ಹೊಂದಿಕೊಂಡಿರುವಾಗ ಕೆಲವರದೇನು ತಕರಾರು? ವರ್ಣಮಾಲೆ ಅದು ಇದ್ದಂತೆಯೇ ಇರಲಿ ಬಿಡಿ.

- ರಾಮಚಂದ್ರ ಎಸ್. ಕುಲಕರ್ಣಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT