ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸಿದ್ದು ಪ್ರಶಸ್ತಿಯಲ್ಲ– ವಿಲೀನ

Last Updated 8 ನವೆಂಬರ್ 2018, 20:23 IST
ಅಕ್ಷರ ಗಾತ್ರ

‘ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳ ಪೈಕಿ ಒಂದು ಪ್ರಶಸ್ತಿಯನ್ನು ಕಾಸರಗೋಡು ಕನ್ನಡಿಗರಿಗೆ ಮೀಸಲಿಡಲಾಗುವುದು’ ಎಂದು ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ (ಪ್ರ.ವಾ., ಕರಾವಳಿ ಪುರವಣಿ, ನ. 2). ಸಚಿವರ ಕಾಳಜಿ ಶ್ಲಾಘನೀಯ.

ರಾಜ್ಯದ ಏಕೀಕರಣದ ನಂತರದ 62 ವರ್ಷಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡವು ಕ್ಷೀಣವಾಗುತ್ತಲೇ ಬಂದಿದೆ. ಅಲ್ಲಿಯ ಕನ್ನಡಿಗರ ‍ಪ್ರತಿಭಟನೆಗಳು ಮತ್ತು ಹೋರಾಟಗಳು ಫಲ ನೀಡಿಲ್ಲ. ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸುವ ಸಲುವಾಗಿ ಕರ್ನಾಟಕದ ಸಹಾಯ ಯಾಚಿಸುತ್ತಲೇ ಇದ್ದಾರೆ. ಅದರ ಅರ್ಥ, ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಕೇಳಿದ್ದಾರೆ ಎಂದಲ್ಲ, ಬದಲಿಗೆ ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನ ಮಾಡಬೇಕು ಎಂಬುದು. ಕಾಸರಗೋಡನ್ನು ಅರ್ಥ ಮಾಡಿಕೊಂಡಿರುವ ಸಚಿವರು, ಅಲ್ಲಿನ ಕನ್ನಡಿಗರ ಭಾವನೆಯನ್ನೂ ಅರ್ಥಮಾಡಿಕೊಂಡಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

ಕೈತಪ್ಪಿಹೋದ ಕಾಸರಗೋಡನ್ನು ಪುನಃ ಪಡೆಯಲು ಅವರು ಏನು ಮಾಡುತ್ತಾರೆ ಎಂಬುದು ಕುತೂಹಲಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT