ನಮ್ಮ ದನಿಯೂ ಇದೇ

7

ನಮ್ಮ ದನಿಯೂ ಇದೇ

Published:
Updated:

‘ಮಹಿಳೆಯರಿಗೂ ಇದು ಪರಿಷತ್ತು ಆಗಲಿ’ (ಸಂಗತ, ಜ. 11) ಬರಹದಲ್ಲಿ ಡಾ.ಎಚ್.ಎಸ್. ಅನುಪಮಾ ಅವರು ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರ ದನಿಯನ್ನು ಆಲಿಸದ, ಮಹಿಳಾ ಸಾಹಿತಿಗಳ ಕೊಡುಗೆಗಳನ್ನು ಸರಿಯಾಗಿ ಗಮನಿಸದೇ ಇರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡಾಂಬೆ, ಭಾರತಾಂಬೆ ಎನ್ನುತ್ತಾ ಎಲ್ಲದರಲ್ಲೂ ಸ್ತ್ರೀ ಮಹತ್ವವನ್ನು ಕಾಣುವವರಿಗೆ ಸಶಕ್ತ ಮಹಿಳಾ ಸಾಹಿತಿಗಳನ್ನು ಗುರುತಿಸಲಾಗದ ಕುರುಡುತನವೇಕೆ?

ಕನ್ನಡ ಓದುಗರ ಮೇಲೆ ಮಹಿಳಾ ಸಾಹಿತಿಗಳ ಪ್ರಭಾವ ಅಪಾರವಿದೆ. ಅವರಿಗೂ ಬಹಳ ಮಂದಿ ಅಭಿಮಾನಿಗಳಿದ್ದಾರೆ. ಇನ್ನು ಮೇಲಾದರೂ ಮಹಿಳಾ ಸಾಹಿತಿಗಳನ್ನು ಸರಿಯಾಗಿ ಗುರುತಿಸುವ ಕೆಲಸವಾಗಲಿ. ಮಹಿಳಾ ಸಾಹಿತಿಯೇ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ. ಸಮರ್ಥ ಮಹಿಳೆಯ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೂ ಬಹುಬೇಗ ಕಾಯಕಲ್ಪ ದೊರೆಯಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !