ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಾಡಗೀತೆ ಮೊಟಕು ಪ್ರಸ್ತಾವ; ಆತುರ ಸಲ್ಲದು

Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನಾಡಗೀತೆಯನ್ನು ಮೊಟಕುಗೊಳಿಸಿ ಎರಡೂವರೆ ನಿಮಿಷಕ್ಕೆ ಇಳಿಸುವ ಪ್ರಸ್ತಾವ ಇನ್ನೊಮ್ಮೆ ಮೇಲ್ಮೆಗೆ ಬಂದಿದೆ ಮತ್ತು ಇದನ್ನು ಆದ್ಯತೆಯ ಮೇಲೆ ಮಾಡುವ ಆತುರ ಕಾಣುತ್ತಿದೆ. ಮೂರು ನಿಮಿಷ ನಿಂತು ನಾಡಗೀತೆ ಹಾಡಲು ಕೆಲವರಿಗೆ ಅನನುಕೂಲವಾಗುತ್ತದೆ ಎನ್ನುವ ಸಮಜಾಯಿಷಿ ನೀಡಲಾಗುತ್ತಿದೆ. ಸರ್ಕಾರ ನೀಡುತ್ತಿರುವ ಈ ಕಾರಣವನ್ನು ಕೇಳಿ, ಮೂರು ನಿಮಿಷಕಾಲ ನಿಂತು ನಾಡಗೀತೆ ಹಾಡಲಾಗದವರು ಕನ್ನಡ ನಾಡು- ನುಡಿಯನ್ನು ಹೇಗೆ ಉಳಿಸಬಹುದು ಮತ್ತು ಬೆಳೆಸಬಹುದು ಎಂದು ಪ್ರಜ್ಞಾವಂತ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ನಾಡಗೀತೆಯನ್ನು ದಿನಾಲೂ ಹಾಡುವುದಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಈ ಅವಕಾಶ ಬರುತ್ತದೆ. ಮೂರು ನಿಮಿಷದ ಹಾಡು ಭಾರವಾಗುತ್ತಿರುವುದು ತೀರಾ ಆಶ್ಚರ್ಯ.

ಅಕಸ್ಮಾತ್‌ ನಾಡಗೀತೆಯನ್ನು ಮೊಟಕುಗೊಳಿಸುವುದಿದ್ದರೆ, ಯಾವುದೇ ಭಾಗಕ್ಕೆ ಕತ್ತರಿ ಹಾಕಿದರೂ ಅದು ಇನ್ನೊಂದು ವಿವಾದವನ್ನು ಸೃಷ್ಟಿಸುವುದರಲ್ಲಿ ಸಂದೇಹವಿಲ್ಲ. ಇದು ಒಂದು ರೀತಿಯಲ್ಲಿ ಮಲಗಿದ ಹುಲಿಯ ಬಾಲವನ್ನು ಅಲುಗಾಡಿಸಿದಂತೆ ಎನ್ನಬಹುದು.

–ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT