ಶುಕ್ರವಾರ, ನವೆಂಬರ್ 22, 2019
20 °C

ಗುಡುಗಿಗಿಂತ ಮಿಂಚೇ ಬಲಶಾಲಿ

Published:
Updated:

‘ಬಿಎಸ್‌ವೈ ಈಗ ಬರೀ ಮಿಂಚು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಟಾಕಿ ಹಾರಿಸಿದ್ದಾರೆ. (ಪ್ರ.ವಾ., ಅ. 13). ಈ ಮಾತನ್ನು ವೈಜ್ಞಾನಿಕ ಆಯಾಮದಲ್ಲಿ ನೋಡಿದಾಗ, ಗುಡುಗಿಗಿಂತ ಮಿಂಚು ಹೆಚ್ಚು ಬಲಶಾಲಿ ಎಂಬ ಸಂಗತಿ ವೇದ್ಯವಾಗುತ್ತದೆ. ಮಿಂಚು ಉಂಟಾದಾಗ ಅಪಾರ ಪ್ರಮಾಣದ ಶಕ್ತಿ ಪ್ರವಹಿಸುತ್ತದೆ.

ಗುಡುಗು ಕೇವಲ ಸದ್ದು ಮಾಡುತ್ತದೆ. ಒಂದರ್ಥದಲ್ಲಿ, ಬಿ.ಎಸ್‌.ಯಡಿಯೂರಪ್ಪನವರು ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾರೆ ಎಂದು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ ಎಂತಲೂ ಅರ್ಥೈಸಿಕೊಳ್ಳಬಹುದೇನೊ!

-ವೆಂಕಟೇಶ ಮುದಗಲ್, ಕಲಬುರ್ಗಿ

ಪ್ರತಿಕ್ರಿಯಿಸಿ (+)