ಭಾನುವಾರ, ಮಾರ್ಚ್ 29, 2020
19 °C

ಹಲವು ಸುಳ್ಳುಗಳಿಗೆ ಸಾಕ್ಷಿಯಾಯ್ತು ಒಂದು ಚಿತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದವರಲ್ಲ. ಅವರು ನಮ್ಮ ಸಂಪರ್ಕದಲ್ಲಿಲ್ಲ. ರೆಸಾರ್ಟ್‌ಗಳಲ್ಲಿ ಆಶ್ರಯ ಕೊಟ್ಟವರು ನಾವಲ್ಲ. ಅದರ ಬಿಲ್ ಪಾವತಿಸಿದ್ದು ನಾವಲ್ಲ’– ಖಂಡಿತಾ ಜನ ನಂಬಿದ್ದರು ಬಿಜೆಪಿ ಮುಖಂಡರ ಈ ಮಾತುಗಳನ್ನೆಲ್ಲ! ನಂಬಲೇಬೇಕಾಗಿತ್ತು. ಆದರೆ... ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಚಿತ್ರ (ಪ್ರ.ವಾ., ನ. 15), ಹಲವಾರು ಬಾರಿ ಅಲ್ಲಗಳೆದದ್ದೆಲ್ಲ ‘ಸುಳ್ಳು’ ಎನ್ನುವುದಕ್ಕೆ ಬಹಿರಂಗ ಸಾಕ್ಷಿಯಾಯಿತು!

‘ಅನರ್ಹ ಶಾಸಕರಿಗೆ ನಾವು ಕೊಟ್ಟ ಭರವಸೆಯನ್ನು ಪಾಲಿಸುತ್ತೇವೆ, ನಂಬಿಕೆದ್ರೋಹ ಮಾಡುವುದಿಲ್ಲ’ ಎಂದು ಪಕ್ಷದ ಮುಖಂಡರು ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಅನರ್ಹ ಶಾಸಕರು ಭಾವಿ ಶಾಸಕರು, ಭಾವಿ ಸಚಿವರು’ ಎಂದು ಹೇಳಿರುವುದಂತೂ ಚುನಾವಣೆಯು ತೆರೆಮರೆಯಲ್ಲಿ ನಡೆಸುವ ಮೇಲಾಟಕ್ಕೆ ನಿದರ್ಶನದಂತಿದೆ.

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು