ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಿಷೇಧಿಸಬೇಕಾದುದು ಗಾಳಿಪ‍ಟ ಹಾರಿಸುವುದನ್ನಲ್ಲ!

ಅಕ್ಷರ ಗಾತ್ರ

ಒಬ್ಬ ಯುವಕ ವಾಹನ ಚಲಾಯಿಸುವಾಗ ದಾರಿಯಲ್ಲಿ ಗಾಳಿಪಟದ ದಾರದಿಂದ ಕುತ್ತಿಗೆಗೆ ಆಳವಾದ ಗಾಯವಾಗಿ, ಇದನ್ನು ತಪ್ಪಿಸಲು ತನ್ನ ಕೈ ಬೆರಳುಗಳಿಂದ ಎಳೆದಾಗ ಬೆರಳುಗಳೂ ಕೊಯ್ದು ರಕ್ತ ಹರಿಯುವಷ್ಟು ಕಠಿಣವಾದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಈ ಸಂದರ್ಭದಲ್ಲಿ ಆತ, ಸರ್ಕಾರ ಗಾಳಿಪಟ ಹಾರಿಸುವುದನ್ನು ನಿಷೇಧಿಸಬೇಕು ಎಂದು ಕೇಳಿಕೊಳ್ಳುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ಆದರೆ ಆ ಅಪಘಾತ ನಡೆದದ್ದು ಗಾಳಿಪಟದಿಂದಲ್ಲ, ಬದಲಿಗೆ ಗಾಳಿಪಟ ಹಾರಿಸಲು ಬಳಸಿದ್ದ ಚೀನಾ ತಯಾರಿತ ಹತ್ತಿಯ ದಾರಕ್ಕೆ ಲೇಪಿಸಿದ್ದ ನುಣುಪಾದ ಗಾಜಿನ ಪುಡಿ ಹಾಗೂ ಅಂಟುದ್ರವ ಮಿಶ್ರಿತ ‘ಮಾಂಜಾ’ ಹೆಸರಿನ ದಾರದಿಂದ ಎಂಬುದು ಆ ಯುವಕನಿಗೆ ತಿಳಿದಿರಲಿಲ್ಲ ಎನಿಸುತ್ತದೆ.

ಸರ್ಕಾರ ಮಾಂಜಾ ಹೆಸರಿನ ದಾರವನ್ನು ಈಗಾಗಲೇ ನಿಷೇಧಿಸಿದೆ. ದುರ್ದೈವವೆಂದರೆ, ಅದನ್ನು ಸ್ವಲ್ಪ ಮಾರ್ಪಾಡು ಮಾಡಿ ಎಲ್ಲೆಡೆ ಮಾರಾಟ ಮಾಡಲಾಗುತ್ತಿದೆ. ಮನುಷ್ಯರಾದರೂ ತಮಗಾದ ನೋವನ್ನು, ಅನ್ಯಾಯವನ್ನು ಎಲ್ಲರ ಮುಂದೆ ಹೇಳಿಕೊಳ್ಳಬಹುದು. ಆದರೆ ಮೂಕ ಪ್ರಾಣಿ ಪಕ್ಷಿಗಳು ಈ ರೀತಿಯ ಅಪಾಯಕಾರಿ ಅಪಘಾತಕ್ಕೊಳಗಾದರೆ ನರಳಿ ಸಾಯುವುದೊಂದೇ ಅವುಗಳಿಗೆ ಉಳಿಯುವ ದಾರಿ. ದಯವಿಟ್ಟು ಇನ್ನಾದರೂ ಇಂತಹ ಪರಿಸರ ಮಾರಕ ದಾರಗಳನ್ನು ನಿಷೇಧಿಸಬೇಕೇ ವಿನಾ ಗಾಳಿಪಟ ಹಾರಿಸುವುದನ್ನಲ್ಲ.

-ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT