ಬುಧವಾರ, ಜುಲೈ 28, 2021
23 °C

ಕೆಆರ್‌ಎಸ್‌: ಪರಿಣತರ ಹೇಳಿಕೆ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳುತ್ತಿದ್ದಾರೆ. ಇದಕ್ಕೆ ವಿರುದ್ಧವಾದ ಹೇಳಿಕೆಗಳನ್ನು ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡುತ್ತಿದ್ದಾರೆ. ಈ ವಾಗ್ವಾದ ಅನೇಕ ತಿಂಗಳುಗಳಿಂದ ಮುಂದುವರಿದಿದೆ. ಇದರಿಂದ ಮಂಡ್ಯ ಜಿಲ್ಲೆಯ ಜನ ಹಾಗೂ ಇತರ ಜನಸಾಮಾನ್ಯರು ಗೊಂದಲದಲ್ಲಿದ್ದಾರೆ. ಅಣೆಕಟ್ಟೆಯ ಪರಿಸ್ಥಿತಿ ಬಗ್ಗೆ ಅದರ ನಿರ್ವಹಣೆ ಮಾಡುತ್ತಿರುವ ತಂತ್ರಜ್ಞರು ಹೇಳಿಕೆ ನೀಡಬೇಕೇ ಹೊರತು ರಾಜಕಾರಣಿಗಳಲ್ಲ. ರಾಜಕಾರಣಿಗಳು ನೀಡುವ ಹೇಳಿಕೆಗಳು ಸಹ ತಂತ್ರಜ್ಞರ ಅಭಿಪ್ರಾಯವನ್ನು ಆಧರಿಸಿ ಇರಬೇಕಾಗುತ್ತದೆ. ಆದ್ದರಿಂದ ಅಣೆಕಟ್ಟೆಯ ನಿರ್ವಹಣೆಯ ಪರಿಣತರು ಈ ಸಂದರ್ಭದಲ್ಲಿ ಹೇಳಿಕೆಯನ್ನು ನೀಡುವ ಮೂಲಕ ಜನರ ಗೊಂದಲ ಹಾಗೂ ರಾಜಕೀಯ ಮೇಲಾಟದ ಹೇಳಿಕೆಗಳಿಗೆ ತೆರೆ ಎಳೆಯಬೇಕಾಗಿದೆ.

–ಈ.ಬಸವರಾಜು, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು