ಸೋಮವಾರ, ಮಾರ್ಚ್ 20, 2023
24 °C

ವಾಚಕರ ವಾಣಿ| ಕಾನೂನು ಗೌರವಿಸುವ ಮಾದರಿ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟ್ ಬೆಲ್ಟ್ ತೆಗೆದ ಕಾರಣಕ್ಕೆ ಅಲ್ಲಿನ ಪೊಲೀಸರು ದಂಡ ವಿಧಿಸಿ ನೋಟಿಸ್ ಜಾರಿ ಮಾಡಿರುವುದು ವರದಿಯಾಗಿದೆ (ಪ್ರ. ವಾ., ಜ. 22). ಕಾನೂನನ್ನು ಎಲ್ಲರಿಗೂ ಅನ್ವಯಿಸಿ ನಿರ್ಭಯದಿಂದ ಕಾರ್ಯ ನಿರ್ವಹಿಸುವ ಸ್ವಾತಂತ್ರ್ಯ ಬ್ರಿಟನ್ ದೇಶದ ಪೊಲೀಸ್ ಅಧಿಕಾರಿಗಳಿಗೆ ಇರುವಂತೆ, ನಮ್ಮ ದೇಶದಲ್ಲಿ ಇಂತಹ ಕಠಿಣ ಕಾನೂನು ಗೌರವಿಸುವ ಪರಿಪಾಟ ಬರಲು ಇನ್ನೂ ಎಷ್ಟು ಶತಮಾನಗಳು ಬೇಕಾಗಬಹುದೋ? ಕಾನೂನುಗಳನ್ನು ಮುರಿಯುವುದೇ ಒಂದು ದೊಡ್ಡ ಸಾಹಸವೆಂಬಂತೆ ಅಥವಾ ದಂಡಕ್ಕೆ ಬದಲಾಗಿ ವಶೀಲಿಗೆ ಒಗ್ಗಿ ಹೋಗಿರುವ ನಮ್ಮ ದೇಶದಲ್ಲಿ ಕಾನೂನುಗಳು ನಾಮಕಾವಸ್ತೆ ಆಗಿ ಪರಿಣಮಿಸಿವೆ.

ಪ್ರಧಾನಿಯೊಬ್ಬರಿಗೆ ದಂಡ ವಿಧಿಸುವಂಥ ಕಾನೂನು ಕ್ರಮ ಜರುಗಿಸಿರುವ ಬ್ರಿಟನ್ ಪೊಲೀಸರ ಕಾರ್ಯ ಶ್ಲಾಘನೀಯ ಮತ್ತು ಅನುಕರಣೀಯ. 

- ಡಿ.ಪ್ರಸನ್ನಕುಮಾರ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು