ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಅನಿಷ್ಟ ಪದ್ಧತಿಯ ಪುನರಾರಂಭ

Last Updated 30 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಕೇರಳ ಸೇರಿದಂತೆ ದೇಶದ ಹಲವಾರು ಕಡೆಗಳಲ್ಲಿ ಜಾತಿ, ಧರ್ಮದ ನೆಪದಲ್ಲಿ ಕೆಲವು ಕಲಾವಿದರಿಗೆ, ಬಹಳ ಮುಖ್ಯವಾಗಿ ಹಾಡುಗಾರರಿಗೆ ತಮ್ಮ ಸಂಗೀತ ಸೇವೆ ನೀಡಲು ಅವಕಾಶ ಕೊಡದಿರುವುದು ಅಮಾನವೀಯವಾದುದು. ಈ ಹಿಂದೆ ಗಾಯಕ ಕೆ.ಜೆ.ಯೇಸುದಾಸ್ ಅವರಿಗೂ– ಅವರು ಹಿಂದೂ ದೇವರುಗಳ ಭಕ್ತರಾಗಿದ್ದರ ನಡುವೆಯೂ– ಕೆಲವು ದೇವಾಲಯಗಳಲ್ಲಿ ಹಾಡಲು ಅವಕಾಶ ಕೊಡದೆ ಇದೇ ರೀತಿಯ ಅವಮಾನ ಮಾಡಲಾಗಿತ್ತು. ಆದರೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಅವರಿಗೆ ಸಂಗೀತ ಸೇವೆ ನೀಡುವ ಅವಕಾಶವಿತ್ತು. ನಂತರ ಕೇರಳದ ದೇವಮಂದಿರಗಳಲ್ಲೂ ಅವರಿಗೆ ಅವಕಾಶ ನೀಡಲಾಯಿತು.

1936ರಲ್ಲಿ ಮಹಾರಾಜ ಚಿತಿರ ತಿರುನಾಳ ಬಲರಾಮ ವರ್ಮ ಒಂದು ಆದೇಶ ಹೊರಡಿಸಿ, ತಳ ಸಮುದಾಯಗಳ ಜನರ ಮೇಲಿದ್ದ ಮಂದಿರ ಪ್ರವೇಶ ನಿಷಿದ್ಧವನ್ನು ರದ್ದುಗೊಳಿಸಿದ್ದರು. ಅಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಕೇರಳದಲ್ಲಿ ನಡೆದ ವೈಕೊಂ ಸತ್ಯಾಗ್ರಹ ಹಾಗೂ ಗುರುವಾಯೂರು ಸತ್ಯಾಗ್ರಹ ಬಹಳ ಪ್ರಮುಖವಾದವು. ಮತ್ತೆ ಈಗ ಅದೇ ರೀತಿಯ ಪ್ರವೃತ್ತಿ ಆರಂಭವಾಗಿರುವುದು ಆತಂಕದ ವಿಚಾರ. ಜನಸಾಮಾನ್ಯರ ಬದುಕಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದ ರಾಜಕೀಯ ಶಕ್ತಿಗಳು ಕೋಮುಧ್ರುವೀಕರಣದ ಮೂಲಕ ಅಧಿಕಾರ ಹಿಡಿಯುವ ಪ್ರವೃತ್ತಿ ಇಂತಹ ಸಾಮಾಜಿಕ ಅನಿಷ್ಟಗಳಿಗೆ ಕಾರಣವಿರಬಹುದು.

ಟಿ.ಸುರೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT