ಶುಕ್ರವಾರ, ಜನವರಿ 27, 2023
27 °C

ವಾಚಕರ ವಾಣಿ| ಧೈರ್ಯದಿಂದ ಎದುರಿಸಬೇಕಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಎಲ್ಲಿಯವರೆಗೆ ಹೆದರುವವರು ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರು ಇದ್ದೇ ಇರುತ್ತಾರೆ!’ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು ಪ್ರಸ್ತುತವೆನಿಸುತ್ತದೆ. ಕೋಲಾರ ಜಿಲ್ಲೆಯ ನಂಗಲಿ ಭಾಗದಲ್ಲಿ ನಡೆದಿರುವ ಪ್ರಕರಣದಿಂದ ಈ ಮಾತು ನೆನಪಾಯಿತು. ದಲಿತ ಯುವಕನು ಒಕ್ಕಲಿಗ ಯುವಕರ ಬೈಕ್ ಅನ್ನು ಹಿಂದಿಕ್ಕಿದ್ದಕ್ಕೆ ಆ ಜಾತಿಯ ನಾಲ್ವರು ಯುವಕರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ, ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೆಂತಹ ವಿಪರ್ಯಾಸ. ಅದೇ ಯುವಕ ಆ ನಾಲ್ವರನ್ನು ಧೈರ್ಯದಿಂದ ಎದುರಿಸಿ, ಜಾತಿ ನಿಂದನೆ ಮಾಡಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಿದ್ದರೆ ಆತ ಇತರ ದಲಿತರಿಗೆ ಮಾದರಿಯಾಗುತ್ತಿದ್ದ. ಅದು ಬಿಟ್ಟು ಅವಮಾನವಾಯಿತು ಎಂದು ಪ್ರಾಣ ಬಿಟ್ಟರೆ ಏನು ಸಾಧಿಸಿದಂತಾಯಿತು?

ದಲಿತ ಯುವಕರು ಯಾವುದೇ ಅವಮಾನಗಳಿಗೆ ಜಗ್ಗದೆ ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಅಂಬೇಡ್ಕರ್ ಅವರ ಅಸ್ತ್ರವನ್ನು ಉಪಯೋಗಿಸಿ ಎದುರಾಳಿಗಳ ಎದೆ ನಡುಗುವಂತೆ ಬದುಕಬೇಕು. ದಲಿತ ಎನ್ನುವ ಕೀಳರಿಮೆಯನ್ನು ಮೊದಲು ಕಿತ್ತು ಬಿಸಾಕಿದರೆ ಆಗ ಭಯ ತಾನಾಗಿಯೇ ದೂರವಾಗುತ್ತದೆ.

- ರಾಜು ಬಿ. ಲಕ್ಕಂಪುರ, ಜಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು