ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಪ್ರತಿಕ್ರಿಯೆ ತೋರದಿದ್ದುದೇಕೆ?

Last Updated 1 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಪ್ರಕರಣದ ದೃಶ್ಯಾವಳಿ ವೀಕ್ಷಿಸಿದಾಗ, ನನಗೆ ಆಶ್ಚರ್ಯ ಹಾಗೂ ವಿಷಾದ ಎರಡೂ ಉಂಟಾಯಿತು. ಮುಸ್ಲಿಂ ಸಹಪಾಠಿಯೊಬ್ಬನನ್ನು ಶಿಕ್ಷಕರು ಭಯೋತ್ಪಾದಕನಿಗೆ ಹೋಲಿಸಿದಾಗ, ಮುಂದಿನ ಸಾಲಿನಲ್ಲಿ ಕೂತವರಿಂದಾಗಲಿ, ಪಕ್ಕದಲ್ಲಿದ್ದ ಯುವತಿಯಿಂದಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕಾಣಿಸಲಿಲ್ಲ. ತತ್‌ಕ್ಷಣ ಉಳಿದ ಹುಡುಗರು ವಿರೋಧ ವ್ಯಕ್ತಪಡಿಸದಿದ್ದುದು ಯಾವ ಕಾರಣಕ್ಕಾಗಿ? ಸರ್ವ ಮತ, ಜಾತಿಯವರು ಕೂಡಿ ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿ, ಜೊತೆಯಲ್ಲಿ ಕಲಿಯುವ ಒಬ್ಬರಿಗೆ, ಕಲಿಸುವ ಗುರುಗಳೇ ಹೀಗೆ ನಿಂದನೆ ಮಾಡಿದಾಗ, ವಿದ್ಯಾರ್ಥಿ ಸಮೂಹದ ವಿವೇಚನೆ ಎಲ್ಲಿ ಮಾಯವಾಯಿತು?

ಕಲಿತ ಆದರ್ಶಗಳನ್ನು ಎಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ? ನಮ್ಮದು ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುತ್ತೇವೆ. ಶಿಕ್ಷಣ ಕ್ಷೇತ್ರ ಎಷ್ಟರಮಟ್ಟಿಗೆ ಅದನ್ನು ಆಚರಿಸಲು ಆಸ್ಪದ ನೀಡುತ್ತಿದೆ? ಎಷ್ಟು ಮಂದಿ ವಿದ್ಯಾರ್ಥಿಗಳು ತಮ್ಮ ಹಕ್ಕು, ಜವಾಬ್ದಾರಿಯನ್ನು ಪ್ರದರ್ಶಿಸುತ್ತಾರೆ?

- ಶ್ಯಾಮಲ ಗುರುಪ್ರಸಾದ್,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT