ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಶುಶ್ರೂಷಕರ ಹುದ್ದೆ ಭರ್ತಿ ಮಾಡಿ, ನಿಜವಾದ ಧೈರ್ಯ ತುಂಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿನ ವಿರುದ್ಧ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಹೋರಾಡುತ್ತಿದ್ದಾರೆ. ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಮತ್ತು 15 ದಿನಗಳಿಂದ ಮನೆಗೇ ಹೋಗದೆ ಶ್ರಮಿಸುತ್ತಿರುವ ಶುಶ್ರೂಷಕಿಯರಿಗೆ ಖುದ್ದು ಮುಖ್ಯಮಂತ್ರಿಯೇ ಕರೆ ಮಾಡಿ ಧೈರ್ಯ ತುಂಬಿದ್ದು ಶ್ಲಾಘನೀಯ. ಆದರೆ ಕಳೆದ ಮೂರು ವರ್ಷಗಳಿಂದ ಶುಶ್ರೂಷಕಿ ವರ್ಗಕ್ಕೆ ಗುತ್ತಿಗೆ ಪದ್ಧತಿಯನ್ನು ಸರ್ಕಾರವು ಅನುಸರಿಸುತ್ತಿದೆ. ಖಾಲಿ ಇರುವ ಎಲ್ಲಾ ಶುಶ್ರೂಷಕಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಈ ವರ್ಗಕ್ಕೆ ನಿಜವಾದ ಧೈರ್ಯ ತುಂಬಿದಂತೆ ಆಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಚೈತನ್ಯವೂ ಸಿಗುತ್ತದೆ.

- ಮಾರುತಿ ಎಂ., ಬೀಳಗಿ, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು