ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ತೋಟಗಳೂ ಮಾಯ, ತೋಳಗಳೂ ಮಾಯ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕಾವೇರಿ ವನ್ಯಧಾಮದಲ್ಲಿ ತೋಳವೊಂದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಪತ್ತೆಯಾಗಿರುವುದು (ವಾ.ವಾ., ಮೇ 10) ಆಶಾದಾಯಕ ಸುದ್ದಿ. ಲಾಕ್‌ಡೌನ್ ದೆಸೆಯಿಂದ ಮನುಷ್ಯನ ಓಡಾಟದ ಗದ್ದಲವಿಲ್ಲದೆ ಅನೇಕ ಪ್ರಾಣಿ– ಪಕ್ಷಿಗಳು ನಿರ್ಭಯವಾಗಿ ಓಡಾಡುತ್ತಿವೆ.

ನಾವು ಬಾಲ್ಯದಲ್ಲಿದ್ದಾಗ ಹೊಲಗಳಲ್ಲಿ ಹಿರಿಯರು ಕೆಲಸ ಮಾಡುವ ವೇಳೆ ತೋಳ, ಕಪ್ಪಲು ನರಿಗಳು ಸದ್ದಿಲ್ಲದೆ ಬಂದು ಮೇಕೆ-ಕುರಿ-ಕೋಳಿಗಳನ್ನು ಲಪಟಾಯಿಸುತ್ತಿದ್ದದ್ದು ಸಾಮಾನ್ಯ ಸಂಗತಿಯಾಗಿತ್ತು. ಆ ಪ್ರಾಣಿಗಳೇನಾದರೂ ಗಾಬರಿಯಿಂದ ಸದ್ದು ಮಾಡಿದರೆ ಮನೆಯವರು, ಆಳುಗಳೆಲ್ಲ ಒಟ್ಟಾಗಿ ಕಿರುಚುತ್ತಾ ಅವುಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದದ್ದು ಈಗ ನೆನಪು ಮಾತ್ರ. ಬೇಟೆ ತಪ್ಪಿದ ದಿನ ರಾತ್ರಿಯ ವೇಳೆಯಲ್ಲಿ ಬಂದು ತೋಟದ ಮನೆಯ ಸುತ್ತ ಹೊಂಚು ಹಾಕಿ ಹೋಗಿದ್ದನ್ನು, ಬೆಳಿಗ್ಗೆ ಎದ್ದಾಗ ಹಿರಿಯರು ಅವುಗಳ ಹೆಜ್ಜೆ ಗುರುತುಗಳನ್ನು ತೋರಿಸಿ ಹೇಳುತ್ತಿದ್ದರು.

ಈಗ ಹೆಚ್ಚಿನ ಹೊಲಗಳು ಮಾಯ, ತೋಟಗಳು ಮಾಯ, ತೋಳ- ನರಿಗಳೂ ಮಾಯ. ಹಲವೆಡೆ ನೀಲಗಿರಿಯೆಂಬ ವಿಷವೃಕ್ಷದ ತೋಪುಗಳು ಜೀವವೈವಿಧ್ಯವನ್ನೆಲ್ಲಾ ಹಾಳು ಮಾಡಿ, ಭೂಮಿಯನ್ನು ಬರಡು ಮಾಡಿ ನಾಗರಿಕ ಜಗತ್ತನ್ನು ಅಣಕಿಸುತ್ತಿವೆ. ⇒ಮಣ್ಣೆ ಮೋಹನ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು