ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಗೆ ಮಾರ್ಗದರ್ಶನ ನೀಡಲಿ

Last Updated 11 ಮಾರ್ಚ್ 2019, 17:16 IST
ಅಕ್ಷರ ಗಾತ್ರ

ಪತ್ರಕರ್ತ ಶಾಹಿದ್ ಸಿದ್ಧಿಕಿ ಅವರು ದಿನದ ಟ್ವೀಟ್‌ನಲ್ಲಿ (ಪ್ರ.ವಾ., ಮಾರ್ಚ್‌ 11) ಹೇಳಿರುವ ಮಾತು ಸ್ವಾಗತಾರ್ಹವಾಗಿದೆ. ಭಾರತವು ಭಯೋತ್ಪಾದನೆಯ ವಿರುದ್ಧ ಸೆಣಸುತ್ತಿದೆಯೇ ಹೊರತು ಪಾಕಿಸ್ತಾನದ ವಿರುದ್ಧವಲ್ಲ. ದೇವರು ಒಬ್ಬನೇ, ನಾಮ ಹಲವು ಎಂದು ನಂಬಿ, ಸರ್ವೇ ಜನಾಃ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಭಾರತದಲ್ಲಿ, ಈ ಹಿಂಸೆ, ಭಯೋತ್ಪಾದನೆ ದೇಶದ ಅಭಿವೃದ್ಧಿಗೆ ಮಾರಕವಾಗಿವೆ.

‘ಸಬ್ ಕಾ ಮಾಲೀಕ್ ಏಕ್ ಹೈ’ ಎಂಬ ಶಿರಡಿ ಬಾಬಾ ಅವರ ಪ್ರತಿಪಾದನೆಯನ್ನು ಭಾರತದಲ್ಲಿರುವ ಧರ್ಮಗುರುಗಳು ಯುವಕರಿಗೆ ಬೋಧಿಸಬೇಕು. ಆಗ ಕಡೇಪಕ್ಷ ಭಾರತದಲ್ಲಿರುವ ಯುವಕರು ಭಯೋತ್ಪಾದಕ ಚಟುವಟಿಕೆಗೆ ಸೇರುವುದು ಕಡಿಮೆಯಾಗಬಹುದು. ಅದಿಲ್ ಅಹ್ಮದ್ ಎಂಬ ಯುವಕ ಆತ್ಮಹತ್ಯೆ ಬಾಂಬರ್ ಆಗಿ ಪುಲ್ವಾಮಾದಲ್ಲಿ ನಮ್ಮ ಸೈನಿಕರನ್ನು ಕೊಂದು ತಾನೂ ಸತ್ತ. ಇಂತಹ ಯುವಕರನ್ನು ತಿದ್ದಲು ಮೌಲ್ವಿಗಳು ಪ್ರಯತ್ನಪಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT