ಸ್ವಾಗತಾರ್ಹ ಸಲಹೆ

7

ಸ್ವಾಗತಾರ್ಹ ಸಲಹೆ

Published:
Updated:

ಮದುವೆಗೆ ಕನಿಷ್ಠ ವಯೋಮಿತಿಯ ವಿಚಾರದಲ್ಲಿ ತಾರತಮ್ಯ ಇರಬಾರದು ಎಂಬ ಕಾರಣಕ್ಕೆ, ಪುರುಷರ ವಿವಾಹ ವಯೋಮಿತಿಯನ್ನು ಈಗಿರುವ 21 ವರ್ಷದಿಂದ 18 ವರ್ಷಕ್ಕೆ ಇಳಿಸುವಂತೆ ರಾಷ್ಟ್ರೀಯ ಕಾನೂನು ಆಯೋಗ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಇದು ಸ್ವಾಗತಾರ್ಹ.

ಸಮಾನತೆ ಎಂಬುದು ಕಾನೂನಿನಿಂದ ಅಳೆಯುವ ವಿಷಯವಲ್ಲ. ಪ್ರಾಕೃತಿಕ, ಮಾನಸಿಕ, ದೈಹಿಕ ಹಾಗೂ ಭೌತಿಕವಾಗಿ ಗಂಡು– ಹೆಣ್ಣುಗಳಲ್ಲಿರುವ ಭೇದವನ್ನು ಸೃಷ್ಟಿಸಿದ ಭಗವಂತನ ನಿರ್ಧಾರವನ್ನು ಜಗತ್ತೇ ಒಪ್ಪತಕ್ಕದ್ದಲ್ಲವೇ? ಪ್ರಕೃತಿದತ್ತವಾದ ಕಾಮನೆಗಳಿಗೆ ವಯಸ್ಸಿನ ಕಡಿವಾಣ ಹಾಕುವುದು ಸಮಂಜಸವೇ? ಈ ಹಿನ್ನೆಲೆಯಲ್ಲಿ ಸ್ತ್ರೀಯರ ವಿವಾಹ ವಯೋಮಿತಿಯನ್ನು ಕೂಡಾ 15 ವರ್ಷಕ್ಕೆ ಇಳಿಸುವುದು ಸೂಕ್ತ. ಇದರಿಂದ ದೇಶದಲ್ಲಿ ಈಗ ದಿನನಿತ್ಯ ನಡೆಯುತ್ತಿರುವ ಅನಾಚಾರ, ಅತ್ಯಾಚಾರದಂಥ ಪ್ರಕರಣಗಳೂ ಕಡಿಮೆಯಾಗಬಹುದು.
–ಕೆ.ವಿ. ಆಚಾರ್ಯ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !