ಇವರಿಗೇಕೆ ಬೆಂಬಲ?

7

ಇವರಿಗೇಕೆ ಬೆಂಬಲ?

Published:
Updated:

ಕಾಡಿನಲ್ಲಿರುವ ನಕ್ಸಲರ ಹಿತೈಷಿಗಳಾದ ನಗರವಾಸಿ ನಕ್ಸಲರನ್ನು ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ‘ಸಂಗತ’ದಲ್ಲಿ (ಆ. 31) ಪ್ರಸನ್ನ ಅವರು ಬರೆದ ಬರಹ ಹಾಗೂ ‘ವಾಚಕರವಾಣಿ’ಯಲ್ಲಿ ಕೆ.ಎನ್‌. ಭಗವಾನ್‌ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಈ ಪ್ರತಿಕ್ರಿಯೆ.

ನಕ್ಸಲರು ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಿ, ಬಂದೂಕಿನ ಸಾಮ್ರಾಜ್ಯ ಸ್ಥಾಪಿಸಬಯಸುವವರು. ಕಳೆದ ಐವತ್ತು ವರ್ಷಗಳಲ್ಲಿ ಹತ್ತು ಸಾವಿರ ಪೊಲೀಸರನ್ನೂ ನೂರಾರು ನಾಗರಿಕರನ್ನೂ ನಕ್ಸಲರು ಕೊಂದಿರುವುದು ಸರ್ವವಿದಿತ. ನಕ್ಸಲರು ಒಂದು ವೇಳೆ ಅಧಿಕಾರಕ್ಕೆ ಬಂದರೆ, ಇದೇ ವರವರರಾವ್ ಮುಂತಾದ ನಗರವಾಸಿ ನಕ್ಸಲರು, ಮಂತ್ರಿಗಳೋ ರಾಜ ಗುರುಗಳೋ ಆಗಿ ನಮ್ಮೆಲ್ಲರ ಸಕಲ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳುತ್ತಾರೆ. ಗಣ್ಯರ ಹತ್ಯೆಗೆ ಸಂಚು ಹೂಡಿದರೆಂದು ಪೊಲೀಸರು ಅವರನ್ನು ಬಂಧಿಸಿದರೆ, ಅವರ ಸ್ವಾತಂತ್ರ್ಯದ ಬಗ್ಗೆ ನಮ್ಮ ಬುದ್ಧಿಜೀವಿಗಳೇಕೆ ಚಡಪಡಿಸುತ್ತಾರೆ?

ಪೊಲೀಸರ ಬಳಿ ಇವರ ವಿರುದ್ಧ ಏನು ಪುರಾವೆಗಳಿವೆ ಎಂಬುದು ಇನ್ನೂ ಯಾರಿಗೂ ತಿಳಿಯದು. ಆರೋಪದಲ್ಲಿ ತಥ್ಯವಿದೆ ಎಂದು ಮೇಲುನೋಟಕ್ಕೆ ಅನಿಸಿದ್ದರಿಂದಲೇ ಆರೋಪಿಗಳನ್ನು ಗೃಹಬಂಧನದಲ್ಲಿರಿಸಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ಆರಂಭಿಸುವುದಕ್ಕೂ ಮೊದಲೇ ತೀರ್ಪು ನೀಡುವುದು ಸರಿಯಲ್ಲ.

ಪೊಲೀಸರು ನಕ್ಸಲರನ್ನು ಬೇಟೆಯಾಡಿ ಕೊಂದಾಗ ಉಸಿರೆತ್ತದ ಬುದ್ಧಿಜೀವಿಗಳು, ನಗರವಾಸಿ ನಕ್ಸಲರ ಪರವಾಗಿ ಚೀರಾಡುತ್ತಿರುವುದು ವಿಪರ್ಯಾಸ. ಸೈದ್ಧಾಂತಿಕ ಕಾರಣಕ್ಕೆ ಗೌರಿ ಲಂಕೇಶ್‌ ಹತ್ಯೆಯ ಸಂಚು ನಡೆಸಿದರೆಂದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಇದನ್ನೂ ಬುದ್ಧಿಜೀವಿಗಳು ವಿರೋಧಿಸುವರೇ? ಅವರಿಗೂ ಸಂವಿಧಾನವು ಸ್ವಾತಂತ್ರ್ಯ ಕೊಟ್ಟಿದೆ ಎಂದು ವಾದಿಸುವರೇ?

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !