ದೇವಾಲಯಕ್ಕೇಕೆ ಶುದ್ಧೀಕರಣ?

7

ದೇವಾಲಯಕ್ಕೇಕೆ ಶುದ್ಧೀಕರಣ?

Published:
Updated:

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದೊಳಗೆ ನಲವತ್ತರ ಹರೆಯದ ಮಹಿಳೆಯರಿಬ್ಬರು ಪ್ರವೇಶಿಸಿದ್ದು ಸ್ವಾಗತಾರ್ಹ ವಿಚಾರ. ಆದರೆ, ಆ ಮಹಿಳೆಯರು ಪ್ರವೇಶಿಸಿದರು ಎಂಬ ಕಾರಣಕ್ಕೆ ವ್ಯಗ್ರರಾದ ಅಲ್ಲಿನ ಅರ್ಚಕರು, ದೇವಾಲಯ ಶುದ್ಧೀಕರಣ ಮಾಡಿದ್ದು ಎಷ್ಟು ಸಮಂಜಸ? ಅಶುದ್ಧವಾಗಿರುವುದು ನಮ್ಮ ಮನಸ್ಸುಗಳೇ ಹೊರತು ದೇವಾಲಯವಲ್ಲ.

ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ತಂದುಕೊಟ್ಟ ಸಂವಿಧಾನವೇ ನಮ್ಮ ಧರ್ಮ, ಅದೇ ನಮಗೆ ದೇವರು. ಅದಕ್ಕೆ ಗೌರವ ಕೊಡದಿದ್ದರೆ ಹೇಗೆ? ದೇವಾಲಯಕ್ಕೆ ಹೋಗುವುದರಿಂದ ಮನಸ್ಸು ಶುದ್ಧವಾಗುತ್ತದೆ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ. ಕೆಲವರ ಪ್ರವೇಶದಿಂದ ದೇವಾಲಯವೇ ಅಶುದ್ಧ, ಅಪವಿತ್ರವಾಗುತ್ತದೆ ಎನ್ನುವುದಾದರೆ ದೇವಾಲಯಗಳೇಕೆ ಬೇಕು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !