ಮಂಗಳವಾರ, ಸೆಪ್ಟೆಂಬರ್ 21, 2021
29 °C

ಖಾಲಿ ಕುರ್ಚಿಯ ಮಹಿಮೆ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸಿ.ಎಂ. ಕುರ್ಚಿ ಖಾಲಿ ಇಲ್ಲ ಎಂದು ಹೇಳುತ್ತಲೇ ಖಾಲಿಯೂ ಆಯಿತು, ತಕ್ಷಣ ಭರ್ತಿಯೂ ಆಯಿತು! ಇನ್ನಿರುವುದು ಡಿ.ಸಿ.ಎಂ. ಕುರ್ಚಿ. ಹಲವರು ಈಗಾಗಲೇ ಈ ಕುರ್ಚಿ ಮೇಲೆ ಟವೆಲ್, ಕರ್ಚೀಫ್ ಹಾಕಿದ್ದು, ದೆಹಲಿಯಿಂದ ಹಾಕುವ ಫ್ಯಾನ್ ಸ್ವಿಚ್‌ಗೆ ಟವೆಲ್, ಕರ್ಚೀಫ್ ಹಾರಿ ಬೀಳಲೂಬಹುದು, ಉಳಿಯಲೂಬಹುದು!

ಇಲ್ಲೂ ಸಲ್ಲದವರು ಸಚಿವ ಸ್ಥಾನದ ಕುರ್ಚಿಗೆ ಲಾಬಿ ನಡೆಸಬಹುದು. ‘ಗುಲಾಬಿ’ ಯಾರಿಗೆ ದಕ್ಕುವುದೋ?! ಇದೂ ದಕ್ಕದಿದ್ದಲ್ಲಿ, ಇದೆಯಲ್ಲ ನಿಗಮ, ಮಂಡಳಿ ಕುರ್ಚಿ! ಅಲ್ಲೂ ಕುರ್ಚಿ ಸಿಗದಿದ್ದರೆ ಶುರುವಾಗುವುದು ವಾಕ್ಸಮರದ ಚರ್ಚೆ, ಕುರ್ಚಿ ವಂಚಿತರಿಂದ! ಹೇಗಿದೆ ನೋಡಿ ಖಾಲಿ ಕುರ್ಚಿಯ ಮಹಿಮೆ!

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು