ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸಮಯ ಉಳಿಸುವ ನಿರ್ಧಾರ

Last Updated 28 ನವೆಂಬರ್ 2019, 19:28 IST
ಅಕ್ಷರ ಗಾತ್ರ

ಪಿಯು ಉತ್ತರ ಪತ್ರಿಕೆಯಲ್ಲಿ ಕಾಣಿಸುವ ಗೊಂದಲ ನಿವಾರಿಸಲು ವಿದ್ಯಾರ್ಥಿಗಳಿಗೆ ಒಂದೇ ಬಾರಿ 42 ಪುಟಗಳ ಬುಕ್‌ಲೆಟ್ ನೀಡುವ ವ್ಯವಸ್ಥೆ ಜಾರಿಗೆ ತರುತ್ತಿರುವುದು ಸೂಕ್ತ ನಿರ್ಧಾರ. ಇದರಿಂದ, ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚುವರಿ ಹಾಳೆ ಪಡೆಯುವ, ಅದನ್ನು ಮೂಲ ಉತ್ತರ ಪತ್ರಿಕೆಯೊಂದಿಗೆ ಜೋಡಿಸುವ ಪ್ರಮೇಯ ಬರುವುದಿಲ್ಲ. ಈ ಕಾರಣಕ್ಕಾಗಿ ಅವರ ಸಮಯವೂ ಉಳಿತಾಯವಾಗುತ್ತದೆ. ಕೆಲವೊಮ್ಮೆ ಉತ್ತರ ಪತ್ರಿಕೆಯೊಂದಿಗೆ ಜೋಡಿಸುವ ಹೆಚ್ಚುವರಿ ಹಾಳೆಯು ಕಳೆದುಹೋಗಿ ತೊಂದರೆ ಆಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ಮೌಲ್ಯಮಾಪಕರು ಹೆಚ್ಚಿನ ಗೊಂದಲ ಹಾಗೂ ಒತ್ತಡಕ್ಕೆ ಸಿಲುಕುತ್ತಿದ್ದರು. ಇದನ್ನೆಲ್ಲ ತಪ್ಪಿಸುವಲ್ಲಿ 42 ಪುಟಗಳ ಬುಕ್‌ಲೆಟ್‌ ನೆರವಾಗಲಿದೆ.

-ಸಂತೋಷ ಜಾಬೀನ್, ಸುಲೇಪೇಟ, ಎಂ.ಕೆ.ಕೇಶವ, ಕುಪನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT