ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬದಲಿಸಿಲ್ಲವೇಕೆ?

Last Updated 29 ನವೆಂಬರ್ 2019, 19:34 IST
ಅಕ್ಷರ ಗಾತ್ರ

ಫಿರೋಜ್‌ ಖಾನ್ ಎಂಬುವರು ತಮ್ಮ ಸಂಸ್ಕೃತ ಅಧ್ಯಾಪಕರಾಗಿ ನೇಮಕಗೊಂಡಿರುವುದನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿರೋಧಿಸುತ್ತಿದ್ದಾರೆ. ಈ ವಿಷಯ ಒತ್ತಟ್ಟಿಗಿರಲಿ, ಭಾರತ ಸರ್ಕಾರವು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಎಂಬ ಹೆಸರುಗಳನ್ನು ಬದಲಿಸದೆ ಹಾಗೇ ಬಿಟ್ಟಿರುವುದೇಕೆ? ಸೆಕ್ಯುಲರಿಸಂ ತತ್ವದ ಆಧಾರದ ಮೇಲೆ ರಚಿತವಾದ ಸರ್ಕಾರ ಈ ಕೆಲಸ ಮಾಡದೇ ಇರುವುದು ಸರಿಯೇ?

ಕರ್ನಾಟಕದಲ್ಲಿ ಸರ್ಕಾರದ ವತಿಯಿಂದ ನಡೆಸುವ ಕಾಮಗಾರಿಗಳಿಗೆ ಗುದ್ದಲಿಪೂಜೆ, ಶಂಕುಸ್ಥಾಪನೆ ಇತ್ಯಾದಿ
ಗಳನ್ನು ಪುರೋಹಿತರ ಕೈಯಲ್ಲಿ ಮಾಡಿಸುವುದು ಸೆಕ್ಯುಲರಿಸಂ ತತ್ವಕ್ಕೆ ಮಾಡುತ್ತಿರುವ ಅವಮಾನ
ವಲ್ಲವೇ? ನಮ್ಮದು ‘ಹಿಂದೂ ರಾಷ್ಟ್ರ’ ಎಂದು ಘೋಷಿತವಾಗಿಲ್ಲವಲ್ಲ. ಜನರಿಗೆ ಕೂಡ ಸೆಕ್ಯುಲರಿಸಂ ಅಂದರೆ ಏನೆಂದು ತಿಳಿದಿದೆಯೇ? ತಿಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆಯೇ?

-ಡಾ. ಎಂ.ರಾಮಕೃಷ್ಣ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT