ಮಂಗಳವಾರ, ಜನವರಿ 21, 2020
19 °C

ಉಪಮುಖ್ಯಮಂತ್ರಿ ಸ್ಥಾನ ಅನಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಉಲ್ಲೇಖವಿಲ್ಲ. ಸಂವಿಧಾನದ 164 (1)ನೇ ವಿಧಿಯು ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ ಎಂದು ತಿಳಿಸುತ್ತದೆ. ಉಪಮುಖ್ಯಮಂತ್ರಿ ಎಂಬುದು ರಾಜಕೀಯ ಅನುಕೂಲಕ್ಕಾಗಿ ಆಡಳಿತಾರೂಢ ಪಕ್ಷಗಳು ಸೃಷ್ಟಿಸಿಕೊಂಡಿರುವ ಹುದ್ದೆ. ರಾಜ್ಯದಲ್ಲಿ ಈಗ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಮತ್ತಷ್ಟು ಉಪಮುಖ್ಯಮಂತ್ರಿ ಹುದ್ದೆಗೆ ಈಗಾಗಲೇ ಬೇಡಿಕೆ ಮತ್ತು ಒತ್ತಡ ಹೆಚ್ಚಿದೆ. ಅದರಿಂದಾಗಿ ಅನಗತ್ಯ ಗೊಂದಲ.

ಈ ಉಪಮುಖ್ಯಮಂತ್ರಿ ಸ್ಥಾನವನ್ನು ರದ್ದುಗೊಳಿಸುವ ಮೂಲಕ ಇಂತಹ ಗೊಂದಲ ನಿವಾರಿಸಬಹುದು. ಈ ಕಾರಣಕ್ಕಾಗಿಯೇ ಹುಟ್ಟಬಹುದಾದ ಭಿನ್ನಮತಕ್ಕೆ ಅವಕಾಶ ಇಲ್ಲದಂತೆಯೂ ಮಾಡಬಹುದು. ಅನಗತ್ಯವಾದ ಈ ಹುದ್ದೆಗೆ ಇನ್ನು ಮುಂದೆ ಅವಕಾಶ ಇಲ್ಲ ಎಂದು ಪಕ್ಷ ನಿಷ್ಠುರವಾಗಿ ಹೇಳಿಬಿಡಲಿ.

ಸದಾನಂದ ಹೆಗಡೆಕಟ್ಟೆ, ಮೂಡುಬಿದಿರೆ

 

 

ಪ್ರತಿಕ್ರಿಯಿಸಿ (+)