ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ನೈತಿಕ ಮಾನದಂಡ ಮತ್ತು ಅಧಿಕಾರದಾಹ

Last Updated 27 ಜುಲೈ 2020, 19:30 IST
ಅಕ್ಷರ ಗಾತ್ರ

ಎಚ್.ವಿಶ್ವನಾಥ್‌ ಅವರು ಸಾಹಿತ್ಯ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಪ್ಪಟ, ಪೂರ್ಣ ಪ್ರಮಾಣದ ರಾಜಕಾರಣಿಯೊಬ್ಬರು ಪರಿಷತ್‌ಗೆ ನಾಮಕರಣಗೊಳ್ಳಲು ಸಾಹಿತ್ಯದ ಮೊರೆ ಹೋಗಿರುವುದು ಪ್ರಸ್ತುತ ಅಧಿಕಾರದಾಹದ ರಾಜಕೀಯ ಪರಿಸರದಲ್ಲಿ ಅಸಂಗತ ಸಂಗತಿಯೇನಲ್ಲ. ಸೃಜನಶೀಲ ಸಾಹಿತಿ ಮಾತ್ರ ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸಬೇಕೆಂಬ ನಿರ್ಬಂಧವಾದರೂ ಎಲ್ಲಿದೆ? ಸಾಹಿತ್ಯ, ಸಾಂಸ್ಕೃತಿಕ ವಲಯದ ವ್ಯಾಖ್ಯೆಯನ್ನು ಬೇಕಾದಷ್ಟು ಹಿಗ್ಗಿಸಬಹುದಾಗಿದೆ.

ವಿಶೇಷ ಕೋಟಾದಡಿ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ನೈತಿಕ ಮಾನದಂಡಗಳು ಇರದೇ ಹೋದಲ್ಲಿ, ಅಧಿಕಾರದಾಹದ ಇಂದಿನ ವಾತಾವರಣದಲ್ಲಿ ಯಾವುದೇ ಸ್ಥಾನಕ್ಕೆ ಯಾರು ಬೇಕಾದರೂ ನಾಮನಿರ್ದೇಶನಗೊಳ್ಳಬಹುದು, ನೇಮಕಗೊಳ್ಳಬಹುದು. ಇಂಥವುಗಳ ವಿರುದ್ಧ ಚಕಾರ ಎತ್ತುವವರಾದರೂ ಯಾರು?

-ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT