ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸುಗಳ ಮೇಲೆ ಸಲ್ಲದ ಆಕ್ರೋಶ

Last Updated 23 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದಲ್ಲಿ ತಮ್ಮ ಹಿತರಕ್ಷಣೆಯನ್ನು ಕಡೆಗಣಿಸಲಾಗಿದೆ ಎನಿಸಿದಾಗ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ, ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಆದರೆ ಅದು ಯಾರಿಗೂ ಯಾವುದಕ್ಕೂ ಹಾನಿ ಉಂಟು ಮಾಡದಂತೆ ಇರಬೇಕು. ಇತ್ತೀಚೆಗೆ ಪ್ರತಿಭಟನೆಯ ನೆಪದಲ್ಲಿ ಕೆಲವರು ವಿನಾಕಾರಣ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಅವುಗಳನ್ನು ಜಖಂಗೊಳಿಸಿದ್ದಾರೆ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದು ಕೈಲಾಗದವರು ಮಾಡುವ ಹೇಡಿತನದ ಕೆಲಸ. ಬಸ್ಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವು ಇರುವುದು ನಮ್ಮ ಸೇವೆಗಾಗಿ. ಒಂದು ದಿನ ಬಸ್‌ ಸಂಚಾರ ಸ್ಥಗಿತಗೊಂಡರೆ ನಮ್ಮ ಜೀವನ ಎಷ್ಟು ಅಸ್ತವ್ಯಸ್ತಗೊಳ್ಳುತ್ತದೆ ಎಂಬುದು, ಆ ಕಷ್ಟ ಅನುಭವಿಸಿದವರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಬಸ್‌ಗಳ ಮೇಲೆ ಆಕ್ರೋಶ ಹೊರಹಾಕುವುದನ್ನು ಬಿಟ್ಟು, ಶಾಂತಿಯುತ ಮಾರ್ಗದಲ್ಲಿ ಪ್ರತಿಭಟನೆಗಳನ್ನು ನಡೆಸಬೇಕು. ಇದು, ಪೌರರ ಲಕ್ಷಣ ಮತ್ತು ಕರ್ತವ್ಯ.

ಸದಾಶಿವ ಎಂ. ಮುರಗೋಡ, ರಾಮದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT