ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸ್ಥಳೀಯತೆಗೆ ಅರ್ಥ ತರಲಿ

Last Updated 22 ಮೇ 2020, 20:00 IST
ಅಕ್ಷರ ಗಾತ್ರ

ಆರ್‌ಎಸ್‌ಎಸ್‌ ಮುಖಂಡ ದತ್ತಾತ್ರೇಯ ಹೊಸಬಾಳೆಯವರು ಸಂದರ್ಶನದಲ್ಲಿ (ಪ್ರ.ವಾ., ಮೇ 20)‘ಗ್ಲೋಬಲೈಸೇಶನ್ನಿನಿಂದ ಲೋಕಲೈಸೇಷನ್‍ಗೆ ಹೊರಳಲು ಇದು ಸಕಾಲ. ಈಗ ನಮ್ಮದು ಗ್ಲೋಕಲೈಸೇಷನ್ (ದೇಸಿ ಜಾಗತೀಕರಣ) ಆಗಬೇಕು’ ಎಂದು ಹೇಳಿರುವುದು ಸ್ವಾಗತಾರ್ಹ. ನಮ್ಮ ದೇಶದ ಆಯಾ ರಾಜ್ಯದಲ್ಲಿ ಆಯಾ ರಾಜ್ಯ ಭಾಷೆಯು ಶಿಕ್ಷಣ ಮಾಧ್ಯಮ ಮತ್ತು ಆಡಳಿತ ಭಾಷೆಯಾಗಬೇಕು. ಸುಪ್ರೀಂ ಕೋರ್ಟಿನ ಆದೇಶದಿಂದಾಗಿ, ಆಯಾ ರಾಜ್ಯ ಭಾಷೆಯನ್ನು ಕಡ್ಡಾಯ ಶಿಕ್ಷಣ ಮಾಧ್ಯಮವನ್ನಾಗಿ ಮಾಡಲಾಗಿಲ್ಲ.

ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು, ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವಂತೆ ಮಾಡಿದರೆ ಸ್ಥಳೀಯತೆಗೆ ಅರ್ಥ ಬರುತ್ತದೆ. ಸಂಸ್ಕೃತಿಯ ಬಗ್ಗೆ ಬಹಳಷ್ಟು ಮಾತನಾಡುವ ಆರ್‌ಎಸ್ಎಸ್, ಈ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ. ಸಂದರ್ಶಕರು ಈ ವಿಷಯದ ಬಗ್ಗೆ ಹೊಸಬಾಳೆಯವರನ್ನು ಪ್ರಶ್ನಿಸಿಲ್ಲ.

-ಅಲ್ಲಮಪ್ರಭು ಬೆಟ್ಟದೂರು,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT