ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನೇರ ಪ್ರಸಾರದಿಂದ ಪಾರದರ್ಶಕತೆ

Last Updated 25 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಾಂವಿಧಾನಿಕ ನ್ಯಾಯಪೀಠಗಳು ನಡೆಸುವ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ಸುಪ್ರೀಂ ಕೋಟ್೯ನ ಮೂವರು ನ್ಯಾಯಮೂರ್ತಿಗಳು ಇದ್ದ ಪೀಠವು 2018ರಲ್ಲಿಯೇ ಆದೇಶ ಹೊರಡಿಸಿದ್ದರೂ ಈವರೆಗೂ ಪೂರ್ಣ ಪ್ರಮಾಣದಲ್ಲಿ ಅದು ಅನುಷ್ಠಾನಕ್ಕೆ ಬರದಿರುವುದು ವಿಷಾದನೀಯ. ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ ಮಾಡುವುದರಿಂದ ಸಾಮಾನ್ಯ ನಾಗರಿಕನಿಗೆ ನ್ಯಾಯಾಲಯದ ಒಳಗೆ ಏನು ನಡೆಯುತ್ತದೆ ಎಂಬುದು ತಿಳಿಯುತ್ತದೆ. ಇದರಿಂದ ನ್ಯಾಯಾಂಗದ ಪ್ರಕ್ರಿಯೆಗಳು ಹೆಚ್ಚು ಪಾರದರ್ಶಕವಾಗುತ್ತವೆ. ಈ ಮೂಲಕ ಪ್ರತೀ ಮನೆಗೂ ನ್ಯಾಯಾಲಯವು ತಲುಪಿದಂತಾಗಿ ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ.

ಕಾನೂನು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ವಿಶಾಲವಾಗುತ್ತಿರುವ ಈ ಹೊತ್ತಿನಲ್ಲಿ, ಡಿಜಿಟಲ್ ಮಾಧ್ಯಮ
ಗಳನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದ ಜನಸಾಮಾನ್ಯರಿಗೆ ಕಾನೂನಿನ ಅರಿವನ್ನು ಮೂಡಿಸುವ ಕಾರ್ಯಕ್ಕೆ ವೇಗ ನೀಡಬೇಕಿದೆ. ನ್ಯಾಯದಾನ ಆಗುತ್ತಿರುವ ಬಗ್ಗೆ ಜನರಿಗೆ ಖಾತರಿಯಾದಾಗ ಅವರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ.

- ನಿರಂಜನ್ ಮೂತಿ೯ ಆರ್.ಕೆ., ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT