ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ರಂಗಮಂದಿರ ಕಾಯ್ದಿರಿಸಲು ತೊಡಕು ನಿವಾರಿಸಿ

Last Updated 27 ಜುಲೈ 2022, 18:41 IST
ಅಕ್ಷರ ಗಾತ್ರ

ಕೋವಿಡ್ ನಿಯಂತ್ರಣಕ್ಕೆ ಬಂದ ನಂತರದಲ್ಲಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿರುವುದು ಖಂಡಿತಾ ಸಂತಸದ ವಿಷಯ. ಆದರೆ ರಂಗ ತಂಡ ಮತ್ತು ಸಾಂಸ್ಕೃತಿಕ ತಂಡಗಳನ್ನು ಕಂಗೆಡಿಸಿರುವುದು ರಂಗಮಂದಿರಗಳ ಬಾಡಿಗೆ ಹೆಚ್ಚಳ ಆಗಿರುವುದು. ಕೊರೊನಾ ಹೊಡೆತದಿಂದ ಸಾವರಿಸಿಕೊಂಡು ಕಾರ್ಯಕ್ರಮ ನೀಡಲು ಮುಂದಾದ ತಂಡಗಳಿಗೆ, ಹೆಚ್ಚಳವಾಗಿರುವ ಬಾಡಿಗೆ ಮತ್ತು ಠೇವಣಿ ಬಿಸಿತುಪ್ಪವಾಗಿದೆ. ಈಗ ರಂಗಮಂದಿರಗಳನ್ನು ಕಾಯ್ದಿರಿಸಲು ಹೊಸ ವೆಬ್‌ಸೈಟ್ ಅಳವಡಿಸಲಾಗಿದೆ. ಅದರಲ್ಲಿ ಕೆಲವು ತೊಡಕುಗಳನ್ನು ಕಲಾತಂಡಗಳು ಎದುರಿಸುತ್ತಿವೆ. ಒಂದೇ ದಿನಾಂಕದ ಒಂದೇ ಅವಧಿಯು ಎರಡೆರಡು ತಂಡಗಳಿಗೆ ನಿಗದಿಯಾಗು ತ್ತಿದೆ. ಕಲಾಗ್ರಾಮ, ಕಲಾಕ್ಷೇತ್ರದ ಕಾಯ್ದಿರಿಸುವಿಕೆಯಲ್ಲಿ ಈ ತೊಂದರೆ ಆಗಿದೆ. ಇದನ್ನು ಇಲಾಖೆಯ ಗಮನಕ್ಕೂ ತರಲಾಗಿದೆ. ತಾಂತ್ರಿಕ ತಪ್ಪಿನಿಂದ ಹೀಗಾಗಿರಬಹುದು ಎನ್ನುತ್ತಾರೆ ಸಂಬಂಧಿಸಿದ ಅಧಿಕಾರಿಗಳು.

ಹಾಗೆಯೇ ‌ನಾಟಕೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೂರು ದಿನ ಸತತವಾಗಿ ಕಾಯ್ದಿರಿಸಲು ತಾಂತ್ರಿಕ ತೊಂದರೆ ಇದೆ. ಆನ್‌ಲೈನ್ ಮೂಲಕ ಕಾಯ್ದಿರಿಸುವ ವ್ಯವಸ್ಥೆ ಸರಿಯಾದ ನಿರ್ಧಾರವಿರಬಹುದು, ಪಾರದರ್ಶಕತೆಗೂ ಅನುವಾಗಿಸಬಹುದು. ಆದರೆ, ಈಗ ರಂಗಮಂದಿರಗಳನ್ನು ಕಾಯ್ದಿರಿಸಿರುವ ಕಾರ್ಯಕ್ರಮಗಳನ್ನು ಗಮನಿಸಿದರೆ, ಮುಖ್ಯವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ, ನೃತ್ಯ, ಗಾಯನಗಳಿಗಿಂತ ಇತರೇ ಕಾರ್ಯಕ್ರಮಗಳು ಹೆಚ್ಚಾಗಿವೆ. ಇನ್ನೊಂದು ಸಂಗತಿ, ಸದ್ಯದಲ್ಲೇ ಕಲಾಗ್ರಾಮ ಸಮುಚ್ಚಯವನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗುವುದೆಂಬ ಸುದ್ದಿ ಕಲಾ ವಲಯದಲ್ಲಿ ಹರಡಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು.

- ಶಶಿಧರ ಭಾರಿಘಾಟ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT