ಗುರುವಾರ , ಫೆಬ್ರವರಿ 27, 2020
19 °C

ಗಾಂಧೀಜಿ ವಿಶ್ವರತ್ನವೇ ಆಗಿದ್ದಾರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮ ಗಾಂಧಿ ಅವರಿಗೆ ಭಾರತರತ್ನ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿರುವ
ಸುಪ್ರೀಂ ಕೋರ್ಟ್‌, ಎಲ್ಲ ಔಪಚಾರಿಕ ಬಿರುದುಗಳನ್ನೂ ಮೀರಿದ ಉನ್ನತ ಗೌರವವನ್ನು ಗಾಂಧಿ ಹೊಂದಿದ್ದಾರೆ ಎಂದು ಹೇಳಿರುವುದು (ಪ್ರ.ವಾ., ಜ. 18) ಔಚಿತ್ಯಪೂರ್ಣವಾಗಿದೆ.

ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳಿಗಾಗಿ ಚಳವಳಿ ನಡೆಸಿ ವಿಶ್ವದ ಗಮನ ಸೆಳೆದವರು. ಭಾರತದಲ್ಲಿ ರೈತರು ಮತ್ತು ಕಾರ್ಮಿಕರ ಪರವಾಗಿ ಚಳವಳಿ ಮಾಡಿದವರು. ಅಹಿಂಸಾತ್ಮಕ ಹೋರಾಟದಿಂದ ಗೆಲುವು ಸಾಧಿಸಬಹುದು ಎಂಬುದನ್ನು ವಿಶ್ವದಲ್ಲೇ ಮೊದಲ ಬಾರಿಗೆ ತೋರಿಸಿಕೊಟ್ಟವರು. ಅವರ ಸರಳತೆಯು ವಿಶ್ವದ ಹಲವು ನಾಯಕರಿಗೆ ಮಾದರಿಯಾಗಿದೆ. ಅವರ ಚಿಂತನೆ, ತತ್ವ, ಆದರ್ಶಗಳನ್ನು ಹಲವು ದೇಶಗಳು ಅಳವಡಿಸಿಕೊಂಡಿವೆ. ಹೀಗಾಗಿ ಗಾಂಧೀಜಿ ‘ವಿಶ್ವರತ್ನ’ವೇ ಆಗಿದ್ದಾರೆ.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು