ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪಿಸಿಎಂಬಿ ಪಠ್ಯಪುಸ್ತಕ: ಪಿಡಿಎಫ್‌ ಪ್ರತಿ ಲಭ್ಯವಾಗಲಿ

Last Updated 9 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರಥಮ ಮತ್ತು ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ವಿಷಯಗಳ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು ಸಿದ್ಧವಾಗಿದ್ದು, ಪ್ರಥಮ ವರ್ಷದ ಒಂದು ಸೆಟ್‌ ಪುಸ್ತಕದ ಬೆಲೆ ₹ 1,370, ದ್ವಿತೀಯ ವರ್ಷದ ಒಂದು ಸೆಟ್‌ ಪುಸ್ತಕದ ಬೆಲೆ ₹ 1,690 ಎಂದು ವರದಿಯಾಗಿದೆ (ಪ್ರ.ವಾ., ನ. 9). ಶಿಕ್ಷಣ ಎಂಬುದು ಲಾಭ ಗಳಿಕೆಯ ಸಲುವಾಗಿ ಮಾಡುವ ವ್ಯಾಪಾರವಲ್ಲ ಎಂಬ ಮಹತ್ವದ ಮಾತನ್ನು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವುದು ಇನ್ನೊಂದು ವರದಿಯಲ್ಲಿದೆ. ಇಲ್ಲಿ ಪಠ್ಯಪುಸ್ತಕಗಳನ್ನು ಮಾರಾಟಕ್ಕೆ ಇಟ್ಟಿರುವುದು ಯಾವುದೇ ಖಾಸಗಿ ಸಂಸ್ಥೆಯಲ್ಲ, ಬದಲಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಂಬುದು ಗಮನಾರ್ಹ.

ಮುದ್ರಿತ ಪ್ರತಿಗಳನ್ನು ಇಷ್ಟೊಂದು ಹಣಕ್ಕೆ ಮಾರಾಟ ಮಾಡುವ ಬದಲು, ವರದಿಯಲ್ಲಿ ಉಲ್ಲೇಖಿಸಿರುವಂತೆ, ಅವರ ಬಳಿಯಿರುವ, ರೆಡಿ-ಟು-ಪ್ರಿಂಟ್‌ ಸಿ.ಡಿಯಿಂದ, ಪಿಡಿಎಫ್‌ ಪ್ರತಿಯನ್ನು ಸಿದ್ಧಪಡಿಸಿ, ಮಂಡಳಿಯ ಜಾಲತಾಣದಲ್ಲಿ ಹಾಕಿದರೆ, ಅಗತ್ಯ ಇರುವವರೆಲ್ಲರೂ ಅದನ್ನು ಪಡೆಯಲು ಅನುಕೂಲವಾಗುತ್ತದೆ. ಈಗ ಬಹುತೇಕ ಎಲ್ಲರ ಬಳಿಯೂ ಫೋನ್‌ ಮತ್ತು ಕಾಲೇಜುಗಳಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಇರುವುದರಿಂದ ಯಾರಿಗೂ ಹೊರೆಯಾಗುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗುವುದರ ಜೊತೆಗೆ, ಅಷ್ಟು ಪ್ರಮಾಣದ ಕಾಗದದ ಬಳಕೆಯೂ ಕಡಿಮೆಯಾಗುತ್ತದೆ.

–ಡಾ. ಬಿ.ಆರ್.‌ಸತ್ಯನಾರಾಯಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT