ಮಂಗಳವಾರ, ಅಕ್ಟೋಬರ್ 22, 2019
21 °C

ಬವಣೆ ಅರಿಯುವ ಸೂಕ್ಷ್ಮಪ್ರಜ್ಞೆ ಬೇಕು

Published:
Updated:

ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಯ ಅಸೂಕ್ಷ್ಮ ಪ್ರಜ್ಞೆಯಿಂದ ಜನಸಾಮಾನ್ಯರಿಗೆ ಹೇಗೆ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಎಚ್.ಕೆ.ಶರತ್‌ ಮನಮುಟ್ಟುವಂತೆ ವಿವರಿಸಿದ್ದಾರೆ (ಸಂಗತ, ಸೆ. 24). ಮಂಡ್ಯ ನಗರದ ಬಹುತೇಕ ಬೀದಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಲುವಾಗಿ ಡಾಂಬರು ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆದು ಪೈಪುಗಳನ್ನು ಹೂಳಲಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಅಗೆದ ಗುಂಡಿಗಳನ್ನು ಸರಿಪಡಿಸಿ ಡಾಂಬರು ಹಾಕುವ ಗೋಜಿಗೇ ಹೋಗಿಲ್ಲ.

ಆಸ್ತಮಾ, ಅಲರ್ಜಿಯಂತಹ ತೊಂದರೆಗಳಿಂದ ನರಳುತ್ತಿರುವವರಿಗೆ ದೂಳಿನಿಂದಾಗಿ ತೊಂದರೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಕಾಲದಲ್ಲಿ ಕಾಮಗಾರಿ ಮುಗಿಸಿ ರಸ್ತೆಗಳನ್ನು ಗುಂಡಿ ಹಾಗೂ ದೂಳು ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸದಿರುವುದು ಜನರ ದೌರ್ಭಾಗ್ಯವೇ ಸರಿ. ಜನರ ಬವಣೆ ಅರಿಯುವ ಸೂಕ್ಷ್ಮ ಪ್ರಜ್ಞೆಯನ್ನು ಅಧಿಕಾರಶಾಹಿ ಇನ್ನಾದರೂ ರೂಢಿಸಿಕೊಂಡು ಬದ್ಧತೆ ಪ್ರದರ್ಶಿಸಲಿ.

ಮಧುಕುಮಾರ ಸಿ.ಎಚ್., ಚಾಮನಹಳ್ಳಿ, ಮದ್ದೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)