ಕನ್ನಡ ಚಲನಚಿತ್ರ ಗೀತೆಗಳ ಸಾಹಿತ್ಯ ಎತ್ತ ಸಾಗಿದೆ ಎಂಬ ಬಗ್ಗೆ ಗೀತರಚನಕಾರರೂ ಸಾಹಿತಿಗಳೂ ಆದ ದೊಡ್ಡರಂಗೇಗೌಡ ಅವರು ಚಿಂತನ ಮಂಥನ ನಡೆಸಿದ್ದಾರೆ (ಪ್ರ.ವಾ., ಮೇ 28). ಇಂದಿನ ಚಿತ್ರಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣವುಳ್ಳ ಚಿತ್ರಗೀತೆಗಳು ಬಂದಿವೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೆ ಯುವ ಮನಸ್ಸುಗಳನ್ನು ಹುಚ್ಚೆಬ್ಬಿಸುವ, ದಾರಿ ತಪ್ಪಿಸುವ, ಸಂಸ್ಕೃತಿ ವಿಹೀನ ಚಿತ್ರಸಾಹಿತ್ಯ ನಿರ್ಮಾಣ ಆಗುತ್ತಿರುವುದೂ ಸುಳ್ಳಲ್ಲ. ಆದ್ದರಿಂದ ದೊಡ್ಡರಂಗೇಗೌಡ ಅವರ ಸಂವೇದನಾಶೀಲ ಪ್ರತಿಕ್ರಿಯೆಗೆ ನಮ್ಮ ಸ್ವಾಗತವಿದೆ.

- ಪ್ರೊ. ಕೆ.ಭೈರವಮೂರ್ತಿ, ನಾ.ನಾಗಚಂದ್ರ,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.