ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಗಿರುವುದು ನವ ಬೆಂಗಳೂರಲ್ಲ

ಅಕ್ಷರ ಗಾತ್ರ

‘ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ… ಇನ್ನೊಂದು ಕೊಡು ಸದಾಶಿವ’– ಇದು ಕನ್ನಡದ ಹಳೆಯ ಮತ್ತು ಅರ್ಥಪೂರ್ಣ ಗಾದೆ. ಸಕಲ ಸೌಲಭ್ಯ ಇರುವ ನವ ಬೆಂಗಳೂರನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು, ವಿಶೇಷ ಅನುದಾನವನ್ನು ಸರ್ಕಾರ ಒದಗಿಸಲಿದೆ ಎನ್ನುವ ಮುಖ್ಯಮಂತ್ರಿಯವರ ಹೇಳಿಕೆ ಈ ಗಾದೆಯನ್ನು ಬೇಡವೆಂದರೂ ನೆನಪಿಸುತ್ತದೆ. ಬೆಂಗಳೂರಿಗೆ ಬೇಕಾಗಿರುವುದು ನಿರಂತರ ವಿದ್ಯುತ್‌ ಪೂರೈಕೆ, ಸ್ವಚ್ಛ ಗಟಾರ, ಹೂಳೆತ್ತಿದ– ಒತ್ತುವರಿ ಇಲ್ಲದ ರಾಜಕಾಲುವೆ, ಗುಂಡಿಮುಕ್ತ ರಸ್ತೆಗಳು, ಕಸ- ತ್ಯಾಜ್ಯರಹಿತ ಬಡಾವಣೆಗಳು, ಅಗೆತ ಇಲ್ಲದ ರಸ್ತೆಗಳು, ನಿರಂತರ ನೀರು ಪೂರೈಕೆ ವಿನಾ ಸಿಂಗಪುರವನ್ನು ಅನಾವರಣಗೊಳಿಸುವ ನವ ಬೆಂಗಳೂರಲ್ಲ.

ನವ ಬೆಂಗಳೂರು ಪರಿಕಲ್ಪನೆಯೇನೋ ಶ್ಲಾಘನೀಯವಾಗಿದೆ. ಅದರೆ ಅಕಸ್ಮಾತ್‌ ಅನುಷ್ಠಾನಗೊಂಡರೆ, ಅದು ವಲಸಿಗರ ತಾಣವಾಗುವುದೇ ವಿನಾ ಕನ್ನಡಿಗರಿಗೆ ಗಗನಕುಸುಮವಾಗುವ ಸಾಧ್ಯತೆಯೇ ಹೆಚ್ಚು. ಮೊದಲು ಬೆಂಗಳೂರು ಬದುಕಲು ನೆಮ್ಮದಿಯ ಸ್ಥಳವಾಗಲಿ, ನವ ಬೆಂಗಳೂರಿನ ಕನಸು ನಂತರದ ಗುರಿಯಾಗಲಿ.

– ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT