ಈಗ ನೆನಪಾಯಿತೇ?

7

ಈಗ ನೆನಪಾಯಿತೇ?

Published:
Updated:

‘ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ವರ್ಷಗಳ ಹಿಂದೆಯೇ ಎ.ಎಸ್. ಪಾಟೀಲ ನಡಹಳ್ಳಿ ಮತ್ತು ಉಮೇಶ್‌ ಕತ್ತಿ ಆರೋಪಿಸಿದ್ದರು. ಪಾಟೀಲ ಪುಟ್ಟಪ್ಪ ಅವರು ಹಲವು ದಶಕಗಳಿಂದ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಈವರೆಗೂ ಇವರ ಜೊತೆ ಧ್ವನಿಗೂಡಿಸದ ಬಸವರಾಜ ಹೊರಟ್ಟಿ, ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಚ್.ಕೆ. ಪಾಟೀಲ ಮುಂತಾದವರು ಈಗ ‘ಉತ್ತರ ಕರ್ನಾಟಕದ ನಿರ್ಲಕ್ಷ್ಯ’ದ ಬಗ್ಗೆ ಬಾಯಿ ಬಿಡುತ್ತಿದ್ದಾರೆ.

ಈ ಮಹನೀಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿದ್ದರೆ ಈ ಸತ್ಯವನ್ನು ಹೇಳಲು ಅವರು ಮುಂದಾಗುತ್ತಿದ್ದರೇ? ತಮ್ಮನ್ನು ನಿರ್ಲಕ್ಷಿಸಿದ್ದನ್ನೇ ಇವರು ‘ಉತ್ತರ ಕರ್ನಾಟಕದ ನಿರ್ಲಕ್ಷ್ಯ’ ಎಂದು ಬಣ್ಣಿಸುತ್ತಿದ್ದಾರೆ ಎಂಬುದು ರಾಜಕೀಯದ ಎ ಬಿ ಸಿ ಡಿ ಬಲ್ಲವರಿಗೆ ಅರ್ಥವಾಗದ ವಿಚಾರವಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !