ಆಧಾರ್ ಕಾರ್ಡ್ ಗೊಂದಲಕ್ಕೆ ಕೊನೆ ಇಲ್ಲವೇ?

ಮಂಗಳವಾರ, ಏಪ್ರಿಲ್ 23, 2019
33 °C

ಆಧಾರ್ ಕಾರ್ಡ್ ಗೊಂದಲಕ್ಕೆ ಕೊನೆ ಇಲ್ಲವೇ?

Published:
Updated:

ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದವರು ತಮ್ಮ ಬಳಿ ಸೂಕ್ತ ದಾಖಲಾತಿ ಇಲ್ಲದಿದ್ದರೆ ಗೆಜೆಟೆಡ್ ಅಧಿಕಾರಿಗಳ ಲೆಟರ್‌ಹೆಡ್‍ನಲ್ಲಿ ಸಹಿ ಮಾಡಿಸಿ ದೃಢೀಕರಣ ಪತ್ರ ತರಬೇಕೆಂಬ ನಿಯಾಮಾವಳಿ ಮಾಡಿರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಗೆಜೆಟೆಡ್ ಅಧಿಕಾರಿಗಳು ಲೆಟರ್‌ಹೆಡ್‍ನಲ್ಲಿ ಸಹಿ ಮಾಡಿಕೊಡಲು ಒಪ್ಪುವುದಿಲ್ಲ. ಅಲ್ಲದೆ ಕೆಲವರ ಬಳಿ ಲೆಟರ್‌ಹೆಡ್‌ ಕೂಡ ಇರುವುದಿಲ್ಲ.

ಇಂತಹ ನಿಯಮದಿಂದ ಅನೇಕ ಬಡವರಿಗೆ ಆರೋಗ್ಯ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸರ್ಕಾರಿ ಸೇವಾ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ. ಈ ಅವೈಜ್ಞಾನಿಕ ನಿಯಮವನ್ನು ರದ್ದುಪಡಿಸಬೇಕು. ನೋಟರಿ ಅಥವಾ ಗ್ರಾಮ ಲೆಕ್ಕಾಧಿಕಾರಿಯ ದೃಢೀಕರಣ ಪತ್ರವನ್ನು ಮಾನ್ಯ ಮಾಡುವ ಮೂಲಕ ಆಧಾರ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. 

–ನಾಗರಾಜ್ ಪಣಕಜೆ, ಬೆಳ್ತಂಗಡಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !