ನಿವೃತ್ತಿ ಘೋಷಿಸಬಾರದೇ!

7

ನಿವೃತ್ತಿ ಘೋಷಿಸಬಾರದೇ!

Published:
Updated:

ನಿವೃತ್ತಿ ಘೋಷಿಸಬಾರದೇ!

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, ‘ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಯುವಕರಿಗೆ ಅವಕಾಶ ಮಾಡಿಕೊಟ್ಟು, ಮಾರ್ಗದರ್ಶಕನಾಗಿ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ’ ಎಂದಿದ್ದಾರೆ.

ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿ, ಮಕ್ಕಳಿಗೂ ಕುಟುಂಬದವರಿಗೂ ಅಧಿಕಾರದ ರುಚಿ ತೋರಿಸಿರುವ ಅನೇಕ ನಾಯಕರು ರಾಜ್ಯದಲ್ಲಿದ್ದಾರೆ. ಅಂಥವರೂ ಇದೇ ಹಾದಿ ತುಳಿಯಬಾರದೇ! ಶಾಶ್ವತ
ವಾಗಿ ತಾವೇ ಅಧಿಕಾರದಲ್ಲಿರಬೇಕು ಎಂದು ಬಯಸುವುದು ಯಾವ ನ್ಯಾಯ? ನಿಮ್ಮ ಹಿಂಬಾಲಕರಾಗಿ ಓಡಾಡಿದವರಿಗೂ ಅವಕಾಶ ಬೇಡವೇ? ಜನರು ನಿಮ್ಮನ್ನು ತಿರಸ್ಕರಿಸುವ ಮೊದಲು, ನೀವೇ ಎಚ್ಚೆತ್ತುಕೊಂಡು ಚುನಾವಣಾ ಕಣದಿಂದ ಹಿಂದೆ ಸರಿಯುವುದು ಲೇಸು.

ವಿ.ಜಿ. ಇನಾಮದಾರ, ಸಾರವಾಡ

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !