ಸೋಮವಾರ, ಸೆಪ್ಟೆಂಬರ್ 23, 2019
28 °C

ದೇಶದಾದ್ಯಂತ ಎನ್‌ಆರ್‌ಸಿ: ಸ್ವಾಗತಾರ್ಹ

Published:
Updated:

ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಕೈಗೊಳ್ಳುವ ಮೂಲಕ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ದೇಶದಿಂದ ಹೊರಹಾಕುವ ಸರ್ಕಾರದ ಚಿಂತನೆ ಸ್ವಾಗತಾರ್ಹ. ಅಕ್ರಮ ವಲಸಿಗರು ದೇಶದ ಅಭಿವೃದ್ಧಿಗೆ ಮಾರಕ. ಅವರಲ್ಲಿ ಕೆಲವರು ಭಯೋತ್ಪಾದಕರ ಜೊತೆಗೂಡಿ ಕೆಲಸ ಮಾಡುವ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರಲು ಸಹ ಪ್ರಯತ್ನಿಸಬಹುದು. ಆದ್ದರಿಂದ ಅವರನ್ನು ಮೂಲ ನೆಲೆಗಳಿಗೆ ಗಡಿಪಾರು ಮಾಡುವುದು ಸೂಕ್ತ.

–ವಸಂತ ಕುಮಾರ್ ಮಲ್ಲಾಪುರ, ದಾವಣಗೆರೆ

Post Comments (+)