ಶನಿವಾರ, ಫೆಬ್ರವರಿ 22, 2020
19 °C

ಪ್ರತೀ ನಗರದಲ್ಲಿ ಪುಸ್ತಕಮಳಿಗೆ ಇರಲಿ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಈಗ ಸದಾ ಕೇಳಿಬರುವ ಒಂದು ಚರ್ವಿತಚರ್ವಣ ಟೀಕೆ- ‘ಕನ್ನಡ ಪುಸ್ತಕ ಕೊಳ್ಳುವವರು, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ’. ಆದರೆ ಎಷ್ಟೋ ತಾಲ್ಲೂಕು ಕೇಂದ್ರಗಳಲ್ಲಿ ಕತೆ, ಕಾದಂಬರಿ, ಕವನದ ಪುಸ್ತಕ ಕೊಳ್ಳಲು ಓದುಗನಿಗೆ ಪುಸ್ತಕಮಳಿಗೆಯೇ ಇರುವುದಿಲ್ಲ.

ಸಮಯ ಕಳೆಯಲು, ತೋರಿಸಿದ ದೃಶ್ಯಗಳನ್ನೇ ಮತ್ತೆ ಮತ್ತೆ ತೋರಿಸುವ ಟಿ.ವಿ ವಾಹಿನಿಗಳಿಗೆ ಪುಸ್ತಕ ಸಂಸ್ಕೃತಿ ಬೆಳೆಸುವುದಕ್ಕಾಗಿ ಕಾಲು ಗಂಟೆಯನ್ನಾದರೂ ಮೀಸಲಿಡುವಷ್ಟು ಕನ್ನಡ ಪ್ರೀತಿ ಇಲ್ಲ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಿ, ರಾಜ್ಯದಾದ್ಯಂತ ತನ್ನ ಕಚೇರಿ ಇರುವ ಊರುಗಳಲ್ಲಿ ಪುಸ್ತಕ ಮಾರುವ ವ್ಯವಸ್ಥೆ ಮಾಡಿದರೆ ಕನ್ನಡ ಪುಸ್ತಕಗಳ ಮಾರಾಟಕ್ಕೆ ಒಂದು ವೇದಿಕೆ ಸಿಕ್ಕೀತು. ಇಂತಹ ಉಪಯುಕ್ತ ಕೆಲಸಗಳನ್ನು ಮಾಡಲು ಇನ್ನು ಮುಂದಾದರೂ ಆಸಕ್ತಿ ವಹಿಸಿದರೆ ಮತ್ತು ಸಾಹಿತ್ಯ ಸಮ್ಮೇಳನ ಅಂಗೀಕರಿಸುವ ನಿರ್ಣಯಗಳಲ್ಲಿ ಕೆಲವನ್ನಾದರೂ ಕಾರ್ಯಗತ ಮಾಡಲು ಪರಿಷತ್ ಇಚ್ಛಾಶಕ್ತಿಯನ್ನು ತೋರಿಸಿದರೆ, ಕನ್ನಡವನ್ನು ಉಳಿಸಿ– ಬೆಳೆಸುವ ಕಾರ್ಯದಲ್ಲಿ ಅದೊಂದು ಮಹತ್ವದ ಕ್ರಮ ಆದೀತು.

ಸತ್ಯಬೋಧ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)