ಮೌನ ಮುರಿಯಬೇಕು!

7

ಮೌನ ಮುರಿಯಬೇಕು!

Published:
Updated:

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ನಡೆಯುತ್ತಿರುವ ‘ಮಿ ಟೂ’ ಅಭಿಯಾನ ದೇಶದಲ್ಲಿ ತೀವ್ರತೆ ಪಡೆಯುತ್ತಿದೆ. ಹಲವು ವರ್ಷಗಳಿಂದ ಮಡುಗಟ್ಟಿ ನಿಂತಿದ್ದ ಆಕ್ರೋಶ, ನೋವು, ಸಂಕಟಗಳು ಈ ಮೂಲಕ ಹೊರಹೊಮ್ಮುತ್ತಿವೆ. ಮಹಿಳೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ನಾಂದಿಯಾಗಿದೆ.

ತಾವು ಅನುಭವಿಸಿದ ಕಿರುಕುಳ, ನೋವನ್ನು ಮಹಿಳೆಯರು ಹೊರಹಾಕುತ್ತಿದ್ದರೂ ಆಡಳಿತದ ಕಡೆಯಿಂದ ಅವರ ಪರವಾಗಿ ಯಾವುದೇ ಸಾಂತ್ವನದ ಮಾತುಗಳು ಕೇಳಿಬಂದಿಲ್ಲ. ಕೇಂದ್ರ ಸಚಿವರ ವಿರುದ್ಧವೇ ಆರೋಪ ಬಂದಿದ್ದರೂ ಅವರ ವಿರುದ್ಧ ಕ್ರಮ ಜರುಗಿಸದೇ ಇರುವುದು ವಿಷಾದನೀಯ.

ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ, ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಬೇಕು. ಸರ್ಕಾರ ಮೌನ ಮುರಿದು ಮಹಿಳೆಯರಿಗೆ ನೈತಿಕ ಹಾಗೂ ಕಾನೂನಾತ್ಮಕ ಬೆಂಬಲ ನೀಡಬೇಕು.

ಮಹದೇವಮ್ಮ, ಮೈಸೂರು

Tags: 

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !