ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತಿ ಗೀತೆಗೆ ನಿರ್ಬಂಧ ಬೇಡ

Last Updated 20 ಜನವರಿ 2019, 17:47 IST
ಅಕ್ಷರ ಗಾತ್ರ

ಶಾಲಾ ವಾರ್ಷಿಕೋತ್ಸವಗಳಲ್ಲಿ ಚಲನಚಿತ್ರ ಗೀತೆಗಳಿಗೆ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಅಭಿನಯ ಮಾಡಿಸದಂತೆ ಶಿಕ್ಷಣ ಇಲಾಖೆ ನಿರ್ದೇಶಿಸಿರುವುದುಸ್ವಾಗತಾರ್ಹ.

ದ್ವಂದ್ವಾರ್ಥ ಹಾಗೂ ಅಶ್ಲೀಲ ಸಾಹಿತ್ಯದ ಗೀತೆಗಳನ್ನು ಬಳಸಿಕೊಂಡು ಮನರಂಜನಾ ಕಾರ್ಯಕ್ರಮ ಮಾಡುವುದು ಮುಜುಗರವೇ ಸರಿ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರುವುದು ಸಹಜ.

ಆದರೆ, ಚಲನಚಿತ್ರಗಳಲ್ಲಿ ದೇಶಭಕ್ತಿ ಹಾಗೂ ಜನಪದ ಸಾಹಿತ್ಯ ಇರುವ ಗೀತೆಗಳೂ ಇರುತ್ತವೆ. ಹೀಗಾಗಿ, ಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರುವ ಇಂತಹ ಗೀತೆಗಳನ್ನು ಬಳಸಲು ಅನುಮತಿ‌ ನೀಡಿ, ಅಶ್ಲೀಲ‌, ದ್ವಂದ್ವಾರ್ಥದ ಗೀತೆಗಳನ್ನು ಮಾತ್ರ ನಿಷೇಧಿಸಬೇಕು.

ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT