ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್ ಕದ್ದಾಲಿಕೆ: ತನಿಖೆ ಆಗಲಿ

Last Updated 16 ಆಗಸ್ಟ್ 2019, 19:24 IST
ಅಕ್ಷರ ಗಾತ್ರ

ಫೋನ್ ಕದ್ದಾಲಿಕೆಯು ಅಕ್ಷಮ್ಯ. ಹಿಂದೆ ಇಂತಹ ಆರೋಪ ಬಂದಾಗ, ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾದರು. ಈ ಬಗೆಯ ಆರೋಪ ಹೊತ್ತ ವ್ಯಕ್ತಿ ಕ್ಷಣಕಾಲವೂ ಅಧಿಕಾರದಲ್ಲಿ ಇರಬಾರದು ಎನ್ನುವುದು ಅವರ ನಿಲುವಾಗಿತ್ತು. ಇದೀಗ ಬೇರೊಂದು ಫೋನ್ ಕದ್ದಾಲಿಕೆ ಪ್ರಕರಣ ಬೆಳಕು ಕಂಡಿದೆ. ಜನಸಾಮಾನ್ಯರು ಸತ್ಯ ತಿಳಿಯಲು ಕಾತರರಾಗಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಪ್ರಜಾಪ್ರಭುತ್ವದ ಪಾವಿತ್ರ್ಯ ಕಾಪಾಡುವ ದೃಷ್ಟಿಯಿಂದ ಅಗತ್ಯ.ಮುಖ್ಯಮಂತ್ರಿ ಈ ವಿಷಯದಲ್ಲಿ ಹಿಂದೆಮುಂದೆ ನೋಡದೆ, ತನಿಖೆಗೆ ಆದೇಶಿಸಿ ಜನರಿಗೆ ಸತ್ಯದರ್ಶನ ಮಾಡಿಸಲು ಮುಂದಾಗಲಿ.

ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT