ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ನಿಷೇಧ: ದ್ವಂದ್ವ ನಿಲುವು ಬೇಡ

Last Updated 29 ಜೂನ್ 2022, 19:30 IST
ಅಕ್ಷರ ಗಾತ್ರ

ಏಕಬಳಕೆ ಪ್ಲಾಸ್ಟಿಕ್ ಅನ್ನು ಜುಲೈ 1ರಿಂದ ನಿಷೇಧಿಸಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಂದಾದರೂ ಪ್ಲಾಸ್ಟಿಕ್ ಭೂತ ಹಾಗೇ ನಿಧಾನಗತಿಯಲ್ಲಿ ನಮ್ಮ ಪರಿಸರದಿಂದ ದೂರವಾಗಲಿ ಎಂದು ಆಶಿಸುತ್ತಾ ಎಲ್ಲರೂ ಈ ದಿಸೆಯಲ್ಲಿ ಕೈಜೋಡಿಸೋಣ. ಆದರೆ ಬಹಳ ಮುಖ್ಯವಾಗಿ, ಸರ್ಕಾರ ತೊಟ್ಟಿಲನ್ನೂ ತೂಗುವ ಮಗುವನ್ನೂ ಚಿವುಟುವ ಕೆಲಸ ಮಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದರಷ್ಟೇ ಸಾಲದು, ಆ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಗಳನ್ನೂ ಮುಚ್ಚಿಸಬೇಕು. ಇಲ್ಲವಾದಲ್ಲಿ ವ್ಯಾಪಾರಿಗಳೇ ಬಲಿಪಶುಗಳು. ಸಾವಿರಾರು ರೂಪಾಯಿಯ ದಂಡವನ್ನು ಅವರು ತೆರಬೇಕಾಗುತ್ತದೆ. ಇದು ಹೀಗೇ ಮುಂದುವರಿದಲ್ಲಿ ಈ ಪ್ಲಾಸ್ಟಿಕ್ ನಿಷೇಧದ ಸುತ್ತೋಲೆಯೇ ದಂಡ ಎನಿಸುತ್ತದೆ.

-ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT