ಅಧಿಕಾರ ಮತ್ತು ಅತೃಪ್ತಿ

7

ಅಧಿಕಾರ ಮತ್ತು ಅತೃಪ್ತಿ

Published:
Updated:

ಹಲವಾರು ವರ್ಷಗಳ ಕಾಲ ‘ಮಂತ್ರಿ ಭಾಗ್ಯ’ವನ್ನು ಅನುಭವಿಸಿದರೂ, ಈಗಷ್ಟೇ ಮಾಜಿ ಸಚಿವರುಗಳಾದ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ ಮುಂತಾದವರು, ಮತ್ತೆ ಸಚಿವ ಸ್ಥಾನ ಸಿಗಲಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸುತ್ತಿರುವುದು ‘ಕಾಮಿಡಿ’ ಯಾಗಿ ಕಾಣುತ್ತಿದೆ.

ಸಿಕ್ಕರೆ ಅಧಿಕಾರ

ಸಿಗುತ್ತದೆ ಸಹಕಾರ

ಸಿಗದಿದ್ದರೆ ಅಧಿಕಾರ

ಮುಂದಿದೆ ಅಸಹಕಾರ’

ಎನ್ನುವುದು ಅತೃಪ್ತರ ಮಂತ್ರವಾಗಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇಂತಹ, ಹಾರಾಟ–ಹೋರಾಟ ಇದ್ದೇ ಇರುತ್ತದೆ. ಇದನ್ನು ತಪ್ಪಿಸಬೇಕೆಂದರೆ, ಶಾಸಕರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೇ ‘ಮಂತ್ರಿಗಿರಿ ಸಿಕ್ಕರೂ ಸಿಗದಿದ್ದರೂ ಶಾಸಕನಾಗಿ ಆಯ್ಕೆಯಾದ ಪಕ್ಷದಲ್ಲೇ ಅವಧಿ ಪೂರೈಸುವೆ’ ಎನ್ನುವ ಸಾಲುಗಳನ್ನು ಸೇರಿಸುವುದು ಉಚಿತ. ಇದರಿಂದ ಆಡಳಿತವು ಸರಾಗವಾಗಿ ನಡೆಯಲು ಸಹಕಾರಿಯಾಗುತ್ತದೆ.

–ಭಾ.ಜ. ನಿಗಮ, ತಿ‍ಪಟೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !